ಐವರು ಆರೋಪಿಗಳ ಬಂಧನ

ಇಂಡಿ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆಗೈದು ಶವವನ್ನು ಜಮೀನಿನಲ್ಲಿ ಹೂತಿಟ್ಟದ್ದು ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಹಿರೇಬೇವನೂರ ಗ್ರಾಮದ ದೌಲತರಾಯ ಬಿರಾದಾರ (61) ಮೃತ ವ್ಯಕ್ತಿ.

ಘಟನೆ ವಿವರ
ಹಿರೇಬೇವನೂರ ಗ್ರಾಮದ ಕಾಶಿನಾಥ ಭಾಸಗಿ ಎಂಬುವವರ ಪತ್ನಿಯೊಂದಿಗೆ ದೌಲತರಾಯ ಬಿರಾದಾರ ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಆರೋಪಿಗಳಾದ ಕಾಶಿನಾಥ ಭಾಸಗಿ, ಬಸವರಾಜ ಭಾಸಗಿ, ಷಣ್ಮುಖಪ್ಪ ಭಾಸಗಿ, ಧರೆಪ್ಪ ಭಾಸಗಿ, ಕರಬಸಪ್ಪ ಕಿಲಾರಿ ಎಂಬುವವರು ಕಳೆದ ೆ.22 ರಂದು ಮಹಿಳೆ ಮೂಲಕ ದೂರವಾಣಿ ಕರೆ ಮಾಡಿಸಿ ದೌಲತರಾಯನನ್ನು ಕರೆಯಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಜಮೀನಿನಲ್ಲಿ ಹೂತು ಹಾಕಿದ್ದರು.

ಒಂದು ತಿಂಗಳಿನಿಂದ ಕಾಣೆಯಾಗಿದ್ದ ದೌಲತರಾಯ ಬಿರಾದಾರನನ್ನು ಪೊಲೀಸರು ಹುಡುಕುತ್ತಿದ್ದರು. ತನಿಖೆ ವೇಳೆ ಕೊಲೆಯಾಗಿರುವುದು ಬಯಲಾಗಿದೆ. ಇಂಡಿ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಶವ ಹೊರತೆಗೆದು ಮರಣೋತ್ತರ ಪರಿಕ್ಷೆ ನಡೆಸಿ 5 ಆರೋಪಿಗಳನ್ನು ಬಂಧಿಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.