ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಇಂಡಿ: ಎರಡು ಬೈಕ್‌ಗಳ ಮೇಲೆ ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ತಾಂಬಾ ಗ್ರಾಮದ ಬಸವೇಶ್ವರ ವೃತ್ತದಿಂದ ಸ್ವಲ್ಪ ಅಂತರದಲ್ಲಿ ರಸ್ತೆ ಕಾವಲು ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಸಚಿನ ಹನುಮಂತ ಹುಬ್ಬಳ್ಳಿ ಹಾಗೂ ಸಿಂದಗಿ ತಾಲೂಕಿನ ಕಡ್ಲೆವಾಡದ ಶಂಕರ ಉಮಲಟ್ಟಿ ಬಂಧಿತ ಆರೋಪಿಗಳು. ದಾಳಿ ವೇಳೆ 19.080 ಲೀಟರ್ ಮದ್ಯ ಹಾಗೂ ಎರಡು ಬೈಕ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಳಗಾವಿ ಅಬಕಾರಿ ಜಂಟಿ ಆಯುಕ್ತರು ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರು ಮತ್ತು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶದಲ್ಲಿ ಅಬಕಾರಿ ನಿರೀಕ್ಷಕ ಸತ್ಯನಾರಾಯಣ ತ್ರಿವೇದಿ, ಸಿಬ್ಬಂದಿ ಬಸವರಾಜ ಜಾಮಗೊಂಡ, ಸಿದ್ದಾರೂಡ ಲಕ್ಕಶೆಟ್ಟಿ, ಅಬಕಾರಿ ರಕ್ಷಕರಾದ ಎಸ್.ಸಿ. ಬಂಡಿ, ಎಸ್.ಟಿ. ದಳವಾಯಿ ಕಾರ್ಯಾಚರಣೆ ನಡೆಸಿದ್ದರು ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.