ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಇಂಡಿ: ಪಟ್ಟಣದ ವಾರ್ಡ್ ನಂ.13ಕ್ಕೆ ಕೂಡಲೇ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ವಾರ್ಡ್ ಸದಸ್ಯ ಅನಿಲಗೌಡ ಬಿರಾದಾರ ಪುರಸಭೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ 13ನೇ ವಾರ್ಡ್‌ನ ಜನತೆ ಸರಿಯಾಗಿ ಪುರಸಭೆಗೆ ಕರ ಕಟ್ಟುತ್ತಾರೆ. ಆದರೆ, ವಾರ್ಡ್‌ನಲ್ಲಿ ಮೂಲ ಸೌಲಭ್ಯಗಳೇ ಇಲ್ಲವಾಗಿವೆ. ಚರಂಡಿಗಳು ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಜನತೆ ಹಗಲು ರಾತ್ರಿ ಸಂಚರಿಸುವಂತಾಗಿದೆ. ವಾರ್ಡ್‌ನಲ್ಲಿನ ಒಂದೇ ಒಂದು ಕೊಳವೆ ಭಾವಿ ಇದ್ದು, ಅದರಲ್ಲೂ ಸಮರ್ಪಕ ನೀರು ಬರುತ್ತಿಲ್ಲ. ರಾತ್ರಿಯಿಡೀ ಬೋರ್ ಮುಂದೆ ಸರದಿಯಲ್ಲಿ ಕೊಡಗಳನಿಟ್ಟು ಕಾಯಬೇಕಿದೆ. ಈ ಕುರಿತು ಮಾದ್ಯಮದವರು ಹಲವಾರು ಪುರಸಭೆ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ, ರಸ್ತೆಗಳಲ್ಲಿ ಕಸದ ರಾಸಿಯೇ ಬಿದ್ದಿದೆ. ಸಮರ್ಪಕ ವಿದ್ಯುತ್ ದೀಪಗಳು ಇಲ್ಲವಾಗಿವೆ. ಇದರಿಂದಾಗಿ ನಿವಾಸಿಗಳು ಕಳ್ಳಕಾಕರ ಭಯದಲ್ಲೇ ಕಾಲಕಳೆಯುವಂತಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ವಾರ್ಡ್‌ನೊಮ್ಮೆ ಪರಿಶೀಲಿಸಿ ಅಗತ್ಯ ಮೂಲ ಸೌಲಭ್ಯ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುರಸಭೆಯ ಕಂಚಾಯ ಅಧಿಕಾರಿ ಪ್ರವೀಣ ಸೋನಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ನಿವಾಸಿಗಳಾದ ಅಪ್ಪು ಪವಾರ, ಮಚ್ಛೇಂದ್ರ ಕದಮ್, ವಿಶಾಲ ಸಿಂದಗಿ, ಪದ್ದು ಉಟಗಿ, ಭೀಮು ಪ್ರಚಂಡಿ, ಮಹೇಶ ಹೂಗಾರ ಮತ್ತಿತರರಿದ್ದರು.

Leave a Reply

Your email address will not be published. Required fields are marked *