blank

ಇಂಡಿ ಪುರಸಭೆ ಸಾಮಾನ್ಯಸಭೆಯಲ್ಲಿ ಮುಖ್ಯಾಧಿಕಾರಿ ವರ್ಗಾವಣೆಗಾಗಿ ಠರಾವು ಪಾಸು

indi, municipal, general assembly, chief, mahantesh hangaragi, transfer, bleaching powder, tender, law,

ಇಂಡಿ: ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರನ್ನು ವರ್ಗಾವಣೆ ಮಾಡುವಂತೆ 23 ಸದಸ್ಯರು ಸೇರಿ ಠರಾವು ಪಾಸ್ ಮಾಡಿದರು.

ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಹಿಂದಿನ ವರ್ಷದ ಲೆಕ್ಕಪತ್ರದ ಬಗ್ಗೆ ದಾಖಲಾತಿ ಪ್ರಕಾರ ಓದಿ ಹೇಳುತ್ತಿದ್ದಂತೆ ರೊಚ್ಚಿಗೆದ್ದ ಬಹುತೇಕ ಸದಸ್ಯರು, ಸದಸ್ಯರ ಗಮನಕ್ಕೆ ಬಾರದಂತೆ ಬಿಲ್ ತೆಗೆದಿದ್ದೀರಿ, ನಿಮಗೆ ಬೇಕಾದವರಿಗೆ, ನಿಮಗೆ ಕಮಿಷನ್ ಕೊಟ್ಟವರಿಗೆ ಟೆಂಡರ್ ನೀಡುತ್ತಿದ್ದೀರಿ, ಬ್ಲೀಚಿಂಗ್ ಪೌಡರ್ ಖರೀದಿಯಲ್ಲಿ ಟೆಂಡರ್ ಕರೆಯದೆ ಮ್ಯಾನ್ಯುವಲ್ ಆಗಿ ಬಿಲ್ ತೆಗೆದಿದ್ದೀರಿ, ಅದೇ ಬ್ಲೀಚಿಂಗ್ ಪೌಡರ್ ಕೆಲವೇ ತಿಂಗಳ ಹಿಂದೆ 47 ರೂಪಾಯಿಗೆ ಖರೀದಿ ಮಾಡಿದ್ದು ಈಗ 65 ರೂಪಾಯಿಗೆ ಖರೀದಿ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಾಧಿಕಾರಿ ಸಮಜಾಯಿಸಲು ಮುಂದಾದಾಗ ಮುಖ್ಯಾಧಿಕಾರಿಗಳ ಮಾತಿಗೆ ಮನ್ನಣೆ ಮಾಡದ ಸದಸ್ಯರು ಇಲ್ಲಿ ಅಂಧಾ ಕಾನೂನು ನಡೆಯುತ್ತಿದೆ. ನಿಮಗೆ ಬೇಕಾದವರಿಗೆ ಬೇಕಾಬಿಟ್ಟಿ ಕೆಲಸ ನೀಡುತ್ತಿದ್ದೀರಿ, ಅವರಿಗೆ ಬಿಲ್ ಸಹ ಬೇಗನೆ ನೀಡುತ್ತೀರಿ, ಈ ಹಿಂದೆ ಕೆಲಸ ಮಾಡಿದ ಹಲವು ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡಿದ್ದೀರಿ ಎಂದು ಆಕ್ರೋಶ ಭರಿತರಾದರು.

ಸಾರ್ವಜನಿಕರಿಗೆ ವಸತಿ ನಿವೇಶನ ಹಂಚಿಕೆಗೆ ಪುರಸಭೆಯ ವ್ಯಾಪ್ತಿಯಲ್ಲಿ ಭೂಮಿ ಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು. ಈ ವೇಳೆ ಪುರಸಭೆ ಸದಸ್ಯರಾದ ವಿಜಯಕುಮಾರ ಮೂರಮನ್, ಶಬ್ಬೀರ್ ಖಾಜಿ ಜಂಟಿಯಾಗಿ ಮಾತನಾಡಿ ಸರ್ಕಾರದಿಂದ ಪ್ರತಿ ಎಕರೆಗೆ ಸಿಗುವ ಹಣದ ಬಗ್ಗೆ ಹೇಳಿ ಎಂದಾಗ ಮಧ್ಯಪ್ರವೇಶಿಸಿದ ಪುರಸಭೆ ಅಧಿಕಾರಿ ಪುರಸಭೆ ವ್ಯಾಪ್ತಿ ಅಂದರೆ 5 ಕಿ.ಮೀ. ಅಂತರವಿರಬೇಕು ಮತ್ತು ಎಕರೆಗೆ 15 ಲಕ್ಷ ನೀಡಲಾಗುತ್ತದೆ ಎಂದರು.

ಕೆಸರಾಳ ಎಲ್.ಟಿ.ಹತ್ತಿರ ಅರಣ್ಯಪ್ರದೇಶದ 10 ಎಕರೆ ಭೂಮಿ ಇದ್ದು, ಅದನ್ನು ಶಾಸಕರ ಗಮನಕ್ಕೆ ತಂದಿದ್ದೇನೆ. ಶಾಸಕರು ಸರ್ಕಾರದ ಮಟ್ಟದಲ್ಲಿ ಮಾಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ, ಪುರಸಭೆ ಅಧಿಕಾರಿ ಮಹಾಂತೇಶ ಹಂಗರಗಿ ಅವರ ಅಧಿಕಾರದ ನಡೆ ಸರಿಯಾಗಿಲ್ಲ. ನಗರದಲ್ಲಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. 5-6 ತಿಂಗಳಿಂದ ಹಣಗಳಿಸುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಸಾರ್ವಜನಿಕರು ಮನೆ ಕಟ್ಟಡಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ಅನುಮತಿ ನೀಡುತ್ತಿಲ್ಲ. ಉತಾರಗಳಿಗಾಗಿ ಬಂದ ಜನರಿಗೆ ಇಲ್ಲಸಲ್ಲದ ಕಾಗದಪತ್ರಗಳು ಕೇಳಿ ಸತಾಯಿಸುತ್ತಿದ್ದಾರೆ. ಕೂಡಲೇ 23 ಸದಸ್ಯರೆಲ್ಲ ಒಕ್ಕೂರಲಿನ ಅಭಿಪ್ರಾಯದೊಂದಿಗೆ ಮುಖ್ಯಾಧಿಕಾರಿ ಬದಲಾವಣೆ ಮಾಡಲು ಠರಾವು ಪಾಸು ಮಾಡೋಣ ಎನ್ನುತ್ತಿದ್ದಂತೆ ಸರ್ವ ಸದಸ್ಯರು ಸಮ್ಮತಿಸಿ ಠರಾವು ಪಾಸು ಮಾಡಲು ಸೂಚಿಸಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಹಾಂಗೀರ ಸೌದಾಗರ ಘನ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಉಮೇಶ ದೇಗಿನಾಳ, ಮುಸ್ತಾಕ ಇಂಡಿಕರ್, ಇಸ್ಮಾಯಿಲ್ ಅರಬ, ಅಯೂಬ ಬಾಗವಾನ, ಅಸ್ಲಂ ಕಡಣಿ, ವಿಜಯಕುಮಾರ ಮೂರಮನ್, ರೇಣುಕಾ ಉಟಗಿ, ಸಂಗೀತಾ ಕರಕಟ್ಟಿ, ಬನ್ನೆಮ್ಮಾ ಹದರಿ, ಶಬ್ಬೀರ್ ಖಾಜಿ, ಶೈಲಜಾ ಪೂಜಾರಿ, ಇಇ ಅಶೋಕ ಚಂದನ್, ಅಸ್ಲಂ ಖಾದಿರ್, ಚಂದು ಕಾಲೇಬಾಗ, ಪ್ರವೀಣ ಸೋನಾರ್, ಹುಚ್ಚಪ್ಪ ಶಿವಶರಣ, ಸೋಮು ನಾಯಕ ಇತರರಿದ್ದರು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…