ಬಸ್ ಪಲ್ಟಿ, ಮಹಿಳೆ ಸಾವು

ಇಂಡಿ: ತಾಲೂಕಿನ ಕಪನಿಂಬರಗಿ ಕ್ರಾಸ್ ಬಳಿ ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ಧನನ್ನು ಉಳಿಸಲು ಹೋದ ಚಾಲಕನಿಂದ ನಿಯಂತ್ರಣ ತಪ್ಪಿಸಿಕೊಂಡ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವಿಗೀಡಾಗಿದ್ದು, 43 ಜನರು ಗಾಯಗೊಂಡಿದ್ದಾರೆ.

ತಾಲೂಕಿನ ಬಬಲಾದ ಗ್ರಾಮದ ಕಸ್ತೂರಿಬಾಯಿ ಅಪ್ಪಾರಾಯ ಬಿರಾದಾರ (45) ಮೃತ ಮಹಿಳೆ. ಧೂಳಖೇಡ ಗ್ರಾಮದ ತನ್ನ ಮಗಳ ಮನೆಗೆ ಹೋಗಿದ್ದ ಅವರು, ಭಾನುವಾರ ಸಂಜೆ ಸೊಲ್ಲಾಪುರ- ವಿಜಯಪುರ ಬಸ್‌ನಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಬಸ್‌ಗೆ ಅಡ್ಡ ಬಂದ ವೃದ್ಧನ ಕಾಲು ತುಂಡಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿಜಯಪುರ ಡಿಪೋಗೆ ಸೇರಿದ ಬಸ್ ಪಲ್ಟಿಯಾಗಿದೆ.

ಸ್ಥಳಕ್ಕೆ ಭೇಟಿ: ಘಟನೆ ಸಂಭವಿಸಿದ ಸುದ್ದಿ ತಿಳಿದು ತಕ್ಷಣವೇ ಶಾಸಕ ಯಶವಂತರಾಯಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವ್ಯಕ್ತಿ ಸಾವು: ಬಸವನಬಾಗೇವಾಡಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ. ಸ್ಥಳೀಯ ಗಣೇಶನಗರದ ನಿವಾಸಿ ಚನಗೊಂಡ ಕಾಶಪ್ಪ ಕುಂಬಾರ (45) ಮೃತ ದುರ್ದೈವಿ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *