ಸರ್ಕಾರಿ ನೌಕರರ ಸಂಘದ ಚುನಾವಣೆ

Indi, Govt.Employees' Association, Election, Basavaraja Ravura, S.S. Patty, Basavaraja Maitri,

ಇಂಡಿ: ತೀವ್ರ ಕುತೂಹಲ ಮೂಡಿಸಿದ್ದ ಇಂಡಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ, ರಾಜ್ಯಪರಿಷತ್ ಸದಸ್ಯ ಹುದ್ದೆಗೆ ಶನಿವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ರಾವೂರ ಹಾಗೂ ಎಸ್.ಡಿ. ಪಾಟೀಲ, ಖಜಾಂಚಿ ಸ್ಥಾನಕ್ಕೆ ಎಸ್.ಎಸ್. ಪ್ಯಾಟಿ ಹಾಗೂ ವಿ.ಪಿ. ನಾಯಕ್, ರಾಜ್ಯಪರಿಷತ್ ಸದಸ್ಯ ಸ್ಥಾನಕ್ಕೆ ಬಸವರಾಜ ಮೇತ್ರಿ ಹಾಗೂ ವಿಜಯಕುಮಾರ ಪೋಳ ಸ್ಪರ್ಧಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ರಾವೂರ ಅವರಿಗೆ 18 ಮತಗಳು ಲಭಿಸಿದ್ದು, ಪ್ರತಿಸ್ಪರ್ಧಿ ಎಸ್.ಡಿ. ಪಾಟೀಲ ಅವರಿಗೆ 15 ಮತಗಳು ಲಭಿಸಿದವು. 3 ಮತಗಳ ಅಂತರದಿಂದ ಬಸವರಾಜ ರಾವೂರ ಅಧ್ಯಕ್ಷರಾಗಿ ಆಯ್ಕೆಯಾದರು.

ಖಜಾಂಚಿ ಸ್ಥಾನದಲ್ಲಿ ಎಸ್.ಎಸ್. ಪ್ಯಾಟಿ ಅವರಿಗೆ 17 ಮತಗಳು, ಪ್ರತಿಸ್ಪರ್ಧಿ ವಿಜಯಕುಮಾರ ನಾಯಿಕ್ ಅವರಿಗೆ 16 ಮತಗಳು ಲಭಿಸಿದವು. ಒಂದು ಮತದ ಅಂತರದಿಂದ ಎಸ್.ಎಸ್. ಪ್ಯಾಟಿ ಆಯ್ಕೆಯಾದರು.

ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಮೇತ್ರಿ ಅವರಿಗೆ 17 ಮತಗಳು ಲಭಿಸಿದ್ದು, ವಿಜಯಕುಮಾರ ಪೋಳ ಅವರಿಗೆ 16 ಮತಗಳು ಲಭಿಸಿದ್ದು, 1 ಮತದ ಅಂತರದಿಂದ ಬಸವರಾಜ ಮೇತ್ರಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಅಂಬಣ್ಣ ಸುಣಗಾರ ಘೋಷಿಸಿದರು.

ವಿಜೇತರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಎಸ್.ವಿ.ಹರಳಯ್ಯ, ನಿಜಣ್ಣ ಕಾಳೆ, ಸುಧಾಕರಗೌಡ ಬಿರಾದಾರ, ಪಿ.ಜಿ. ಕಲ್ಮನಿ, ಶಿವಶರಣ ಹಂಜಗಿ, ಡಾ. ಕಾಂತು ಇಂಡಿ, ಜಿ.ಎಂ. ಬಿರಾದಾರ, ತುಕಾರಾಮ ಹೊಸಮನಿ, ಗಡ್ಡೆಪ್ಪ ಅವಜಿ, ಪ್ರಕಾಶ ಚವಡಿಹಾಳ, ಎಚ್.ಎಚ್. ಗುನ್ನಾಪೂರ, ಯಲ್ಲಪ್ಪ ಪೂಜಾರಿ, ಎಂ.ಆರ್. ರಾಠೋಡ, ಎಸ್.ಎಸ್. ಪೂಜಾರಿ, ರವಿ ಗಿಣ್ಣಿ, ಕೆ.ಎಂ. ಅತ್ತಾರ, ಮಹೇಶ ಮಡಿವಾಳ, ಸಂತೋಶ ಪಾಟೀಲ, ಜೈನು ಹೊಸೂರ, ಅಲ್ತ್ಾ ಬೋರಾಮಣಿ ಇತರರಿದ್ದರು.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…