ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಇಂಡಿ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಗ್ಯಾರೇಜ್ ಮತ್ತು ಸಾಗರ ಕುಷನ್ ವರ್ಕ್ಸ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಕುಷನ್ ವರ್ಕ್ಸ್ ಅಂಗಡಿ ನಿತಿನ್ ಮಹಾದೇವ ಸಿಂಧೆ ಅವರಿಗೆ ಸೇರಿದ್ದು, ಅಂದಾಜು 2 ಲಕ್ಷ 90 ಸಾವಿರ ರೂ. ಮೌಲ್ಯದ ಆಸ್ತಿಯಲ್ಲಿ 2 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗ್ಯಾರೇಜ್‌ನಲ್ಲಿ ವಸ್ತುಗಳು ಸುಟ್ಟಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಭಾರಿ ಅವಘಡ ತಪ್ಪಿಸಿದರು. ಯಾವುದೇ ಪ್ರಕರಣ ದಾಖಲಾಗಿಲ್ಲ.

Leave a Reply

Your email address will not be published. Required fields are marked *