More

    ಬ್ಲಾಕ್​​ಬಸ್ಟರ್​​ ‘2018’ ಮಲಯಾಳಂ ಚಿತ್ರದ ನಿರ್ದೇಶಕನಿಗೆ ಒಲಿದು ಬಂತು ಅದೃಷ್ಟ!; ಶುಭಾಶಯ ತಿಳಿಸಿದ ಚಿತ್ರರಂಗ

    ಕೇರಳ: ಮಲಯಾಳಂ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ದಾಖಲೆಯನ್ನು ನಿರ್ಮಿಸಿದ ‘2018’ ಚಿತ್ರದ ನಿರ್ದೇಶಕ ಆಂಥನಿ ಜೋಸೆಫ್​​ ಅವರಿಗೆ ಲೈಕಾ ಪ್ರೊಡಕ್ಷನ್ಸ್ ವತಿಯಿಂದ ದೊಡ್ಡ ಆಫರ್​ ಒಂದು ಅರಸಿ ಬಂದಿದೆ.

    ಇದನ್ನೂ ಓದಿ: ಪ್ರತಿ ತಿಂಗಳ 3ನೇ ಶನಿವಾರ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನದ ಆಚರಣೆ

    ಮೇ 2023 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘2018’ ಮಾಲಿವುಡ್​​ ಅಂಗಳದಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2018 ಫಿಲಂ ಮಲಯಾಳಂ ಚಿತ್ರರಂಗಕ್ಕೆ ಒಂದು ಮೈಲಿಗಲ್ಲನ್ನು ತಂದುಕೊಟ್ಟಿದ್ದು, ಈ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಜೂಡ್ ಆಂಥನಿ ಜೋಸೆಫ್ ಅವರಿಗೆ ಅನೇಕ ಆಫರ್‌ಗಳು ಹರಿದುಬಂದಿವೆ.

    ಆಫರ್​ಗಳನ್ನು ಪರಿಶೀಲಿಸಿ ಆಯ್ದುಕೊಳ್ಳುವಲ್ಲಿ ಆಂಥನಿ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈ ಪೈಕಿ ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡುವಲ್ಲಿ ಅಗ್ರಸ್ಥಾನ ಗಳಿಸಿರುವ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಇದೀಗ 2018 ನಿರ್ದೇಶಕರನ್ನು ಸಂಪರ್ಕಿಸಿದೆ. ತಮ್ಮ ಬ್ಯಾನರ್​​ನಲ್ಲಿ ಮುಂದಿನ ಚಿತ್ರವನ್ನು ನಿರ್ದೇಶಿಸಲು ಆಂಥನಿ ಅವರಿಗೆ ಮನವಿ ಮಾಡಿದೆ.

    ಇದನ್ನೂ ಓದಿ: 14ನೇ ವಯಸ್ಸಿನಲ್ಲಿಯೇ ಕೋಟ್ಯಧಿಪತಿಯಾಗಿದ್ದರು ಈ ಐಪಿಎಸ್ ಅಧಿಕಾರಿ!

    ಈ ಚಿತ್ರಕ್ಕಾಗಿ ನಿರ್ದೇಶಕ ಆಂಥನಿಗೆ ಲೈಕಾ ಪ್ರೊಡಕ್ಷನ್ಸ್ ಭಾರಿ ಕೊಡುಗೆಯನ್ನು ನೀಡಿದೆ. ಹೊಸ ಸಿನಿಮಾದ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಡುವ ನಿಟ್ಟಿನಲ್ಲಿ ಲೈಕಾ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ 30 ಸೆಕೆಂಡ್​​ ಇರುವ ವೀಡಿಯೋ ತುಣುಕನ್ನು ಪೋಸ್ಟ್​ ಮಾಡಿ ಸಂತಸ ಹಂಚಿಕೊಂಡಿದೆ. ಮೂಲಗಳ ಪ್ರಕಾರ, ಜೂಡ್ ಆಂಥನಿ ಜೋಸೆಫ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ನಿವಿನ್ ಪೌಲಿ ಮತ್ತು ವಿಜಯ್ ಸೇತುಪತಿ ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts