More

    ‘ನನ್ನ ದೇಶ – ನನ್ನ ನೆಲ’ ಅಭಿಯಾನದಲ್ಲಿ ಸಾಂಸ್ಕೃತಿಕ ರಂಗು

    ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೇಂದ್ರ ಸಂಸ್ಕೃತಿ ಸಚಿವಾಲಯ (ಬೆಂಗಳೂರು) ಹಾಗೂ ನಗರದ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ‘‘ ‘ನನ್ನ ದೇಶ – ನನ್ನ ನೆಲ’ ಅಭಿಯಾನದಲ್ಲಿ ಭಾರತೀಯ ಸಂಸ್ಕೃತಿ ಸಾರುವ ಕಲಾಪ್ರದರ್ಶನ ಕಣ್ಮನ ಸೆಳೆಯಿತು.

    ಕಾರ್ಯಕ್ರಮದಲ್ಲಿ ಕಲಾರಾಧಕಿ ಶುಭ ಅಮೃತ ಚಾಲನೆ ನೀಡಿದರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ದೇಶದ ಸಂಸ್ಕೃತಿ ಹಾಗೂ ಪರಂಪರೆ ಕುರಿತಾದ ವಿಚಾರಧಾರೆಗಳನ್ನು ಹಂಚಿಕೊಂಡರು.

    ಕಾರ್ಯಕ್ರಮದಲ್ಲಿ ನೂಪುರ ಭ್ರಮರಿ ಸಂಸ್ಥೆಯ ಸಂಸ್ಥಾಪಕಿ ಡಾ. ಬಿ.ಎನ್. ಮನೋರಮಾ ನೃತ್ಯ ಸಂಸ್ಥೆಯ ವತಿಯಿಂದ ಭರತನಾಟ್ಯದ ಮಹತ್ವವನ್ನು ಸಾರುವ ನೃತ್ಯ ಪ್ರದರ್ಶನಗಳು ನಡೆದವು. ನಿರ್ಮಿತಿ ಸಂಸ್ಥೆಯ ಸಂಸ್ಥಾಪಕಿ ಧ್ವರಿತ ವಿಶ್ವನಾಥನ್ ಡಿ. ವಿ. ಗುಂಡಪ್ಪನವರ ಕಗ್ಗಗಳನ್ನು ಆಧರಿಸಿದ ‘ಕಗ್ಗರಸಧಾರೆಗೆ’ ಸಂಗೀತ ರಸಧಾರೆ ಸೇರಿಸಿ ಅದ್ಭುತ ಭರತನಾಟ್ಯದ ಪ್ರದರ್ಶನ ನೀಡಿದರು.

    ನೃತ್ಯಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅಮೋಘ ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ವರ್ಣಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಕಲಾವಿದರು ಭಾರತಮಾತೆಯ ಕುರಿತಾದ ವರ್ಣರಂಜಿತ ಚಿತ್ರಗಳನ್ನು ರಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts