ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ವೇಳೆ ಸಲ್ಲಿಸಿದ ಆಸ್ತಿ ವಿವರ ಹೀಗಿದೆ…

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಭಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ನಟಿ ಸುಮಲತಾ ಅವರು ನಾಮಪತ್ರದಲ್ಲಿ ದಾಖಲಿಸಿರುವ ಆಸ್ತಿ ವಿವರ ಈ ಕೆಳಕಂಡಂತಿದೆ.

ಸುಮಲತಾ ಅಮರನಾಥ್ ಎಂಬ ಹೆಸರಿನಲ್ಲಿ ನಾಮಪತ್ರ ಸಲ್ಲಿಸಲಾಗಿದೆ. ಸುಮಲತಾ ಅವರ ಬಳಿ ಒಟ್ಟು 12,70,363 ರೂ. ನಗದು ಇರುವುದಾಗಿ ಘೋಷಣೆ ಮಾಡಿದ್ದಾರೆ. ಎಚ್ ಡಿಫ್​ಸಿ ಬ್ಯಾಂಕ್ 2 ಖಾತೆಗಳಲ್ಲಿ ತಲಾ 32,34,964 ರೂ. ಹಾಗೂ 1,95,000 ರೂ., ಸಿಟಿ ಬ್ಯಾಂಕ್ ನಲ್ಲಿ 57,85,694 ರೂ. ಮತ್ತು ಎಸ್​ಬಿಐ 2 ಖಾತೆಗಳಲ್ಲಿ ತಲಾ 28,52,278 ರೂ. ಹಾಗೂ 11,20,617 ರೂ. ಉಳಿತಾಯ ಹಣ ಇರುವುದಾಗಿ ಉಲ್ಲೇಖಿಸಿದ್ದಾರೆ.

ವಿವಿಧ ಬ್ಯಾಂಕ್​ಗಳಲ್ಲಿ ಷೇರುಗಳು ಮತ್ತು ಬಾಂಡ್ ರೂಪದಲ್ಲಿಯು ಹೂಡಿಕೆ ಮಾಡಿದ್ದಾರೆ. ವಿಜಯಾ ಬ್ಯಾಂಕಲ್ಲಿ 38,975 ರೂ. ಹಾಗೂ ಎಚ್​ಡಿಎಫ್​ಸಿ ಬ್ಯಾಂಕಿನ 2 ಪಿಂಚಣಿ ಯೋಜನೆಯಲ್ಲಿ ತಲಾ 3 ಲಕ್ಷ ಹಾಗೂ 75 ಲಕ್ಷ ರೂ ಹೂಡಿಕೆ ಮಾಡಿದ್ದಾರೆ.

ಕಳೆದ 5 ವರ್ಷಗಳಿಂದ ಸುಮಲತಾ ಅವರು ಅಂಬರೀಷ್​ಗಿಂತ ಹೆಚ್ಚು ದುಡಿದಿದ್ದಾರೆ. 2013ರಿಂದ 2018ರವರೆಗೆ ಅಂಬಿ ಆದಾಯ 81,66,510 ರೂ. ಆಗಿದ್ದರೆ, ಸುಮಲತಾ ಆದಾಯ 4,45,87,717 ರೂ. ಗಳಾಗಿದೆ. ಜತೆಗೆ ಮೈಸೂರಿನ ತ್ರಿಭುವನ್ ಟವರ್ಸ್​ನಲ್ಲಿ ಶೇ.25 ಷೇರು ಇದ್ದು, ಅದರ ಮೌಲ್ಯ 41 ಲಕ್ಷ ರೂಪಾಯಿಯಷ್ಟಿದೆ. (ದಿಗ್ವಿಜಯ ನ್ಯೂಸ್​)