19ರಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಧರಣಿ

ಸಾಗರ: ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜೂ.19ರಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ತಿಳಿಸಿದರು.

ಮೇ 27ರ ಒಳಗೆ ಪೌಷ್ಟಿಕ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಗಡುವು ನೀಡಲಾಗಿತ್ತು. ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅರಣ್ಯ ಮೂಲ ಬುಡಕಟ್ಟು ಜನರಿಗೆ ವರ್ಷದಲ್ಲಿ ಆರು ತಿಂಗಳು ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು 2019ರಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಕೊರಗ, ಕಾಡುಕುರುಬ, ಜೇನುಕುರುಬ, ಸೋಲಿಗ, ಎರವ, ಗೊಂಡ, ಮಲೆಕುಡಿ, ಗೌಡಲು ಮತ್ತು ಹಸಲರು ಫಲಾನುಭವಿಗಳಾಗಿದ್ದಾರೆ. ಮಳೆಗಾಲದಲ್ಲಿ ಕೂಲಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆ ನಮಗೆ ಹೆಚ್ಚು ಉಪಯುಕ್ತವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಯೋಜನೆ ಜಾರಿಯಲ್ಲಿತ್ತು. ಆದರೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸಲರಿಗೆ ಯೋಜನೆ ತಲುಪಿಲ್ಲ ಎಂದರು.
ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ ತಾಲೂಕಿನ ಹಸಲರು, ಗೊಂಡರು ಮಾತ್ರ ಫಲಾನುಭವಿಗಳಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದಾಗ ವರ್ಷಪೂರ್ತಿ ಪೌಷ್ಟಿಕ ಆಹಾರ ನೀಡಲು ಆದೇಶ ಮಾಡಿದ್ದಾರೆ. ಆದರೆ ಮಾರ್ಚ್‌ನಿಂದ ಜೂನ್‌ವರೆಗೆ ಆಹಾರ ಪೂರೈಕೆ ಮಾಡಿಲ್ಲ. ಜತೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಪೌಷ್ಟಿಕ ಆಹಾರ ವಿತರಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯದ 10 ಬುಡಕಟ್ಟು ಸಮುದಾಯಗಳಿಗೆ 20 ವರ್ಷದಿಂದ ಯೋಜನೆಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು 2007ರಲ್ಲಿ ರಾಮಣ್ಣ ಹಸಲರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. 2019ರಿಂದ ಯೋಜನೆ ಜಿಲ್ಲೆಯ ಎರಡು ಸಮುದಾಯಕ್ಕೆ ತಲುಪುತ್ತಿದೆ. ಮೊದಲು ಆರು ತಿಂಗಳು ಇತ್ತು. ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಪೌಷ್ಟಿಕ ಆಹಾರ ಪೂರೈಸುವ ಭರವಸೆ ನೀಡಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಪೌಷ್ಟಿಕ ಆಹಾರ ಕೊಡುವುದನ್ನೇ ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲಕ್ಷ್ಮಮ್ಮ ಹಿರೇಮನೆ, ನರಸಿಂಹ ಹೊಸನಗರ, ಅಣ್ಣಪ್ಪ, ಹರೀಶ ಸುದ್ದಿಗೋಷ್ಠಿಯಲ್ಲಿದ್ದರು.

Share This Article

ಬಿಳಿ vs ಗುಲಾಬಿ: ಯಾವ ಬಣ್ಣದ ಡ್ರ್ಯಾಗನ್​ ಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dragon fruit

ಡ್ರ್ಯಾಗನ್​ ಫ್ರೂಟ್ಸ್ ( Dragon fruit ) ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲೇ ತನ್ನದೇಯಾದ…

International Coffee Day : ಬೆಕ್ಕಿನ ಮಲದಿಂದ ತಯಾರಿಸುವ ಬಿಸಿ ಬಿಸಿ ‘ಕಾಫಿ’ ಗೆ ಭಾರಿ ಡಿಮ್ಯಾಂಡ್​​….

ಬೆಂಗಳೂರು: (International Coffee Day )  ಕಾಫಿಯ  ( Coffee ) ಕ್ರೇಜ್  ಎಷ್ಟರ ಮಟ್ಟಿಗೆ…

Life Partner Secrets : ನಿಮ್ಮ ಹೆಂಡ್ತಿಯ ಮುಂದೆ ಈ ವಿಚಾರ ಮುಚ್ಚಿಟ್ರೆ ಕಾದಿದೆ ಅಪಾಯ!

ಬೆಂಗಳೂರು: ದಾಂಪತ್ಯ ಎನ್ನುವುದು ಸುಂದರವಾದ ಬಂಧವಾಗಿದೆ. ದಂಪತಿಗಳ ಮಧ್ಯೆ ಪ್ರೀತಿ, ಹೊಂದಾಣಿಕೆ ಮುಖ್ಯವಾಗಿದೆ. ಚಾಣಕ್ಯನ ನೀತಿಶಾಸ್ತ್ರದಲ್ಲಿ…