ಮುಂಡಗೋಡ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ತಹಸೀಲ್ದಾರ್ ಕಚೇರಿಯ ಎದುರು ಗುರುವಾರ ಆರಂಭಿಸಿದ್ದಾರೆ.
ತಹಸೀಲ್ದಾರ್ ಕಚೇರಿಯ ಎದುರು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಬೆಳಗ್ಗೆಯಿಂದ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಕುಳಿತಿದ್ದು, ಗ್ರಾಮ ಆಡಳಿತ ಅಧಿಕಾರಿಗೆ ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಟೇಬಲ್, ಖುರ್ಚಿ,ಅಲ್ಮೇರಾ, ಮೊಬೈಲ್, ಪ್ರಿಂಟರ್, ಸ್ಕಾ್ಯನರ್ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಹಾಗೂ ಶಿಷ್ಟಾಚಾರ ಕೆಲಸದಿಂದ ನಮ್ಮನ್ನು ಕೈ ಬಿಡಲು ಆದೇಶ ಮಾಡಬೇಕು. ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡಬೇಕು, ಹಾಲಿ ಇರುವ ರ್ಯಾಕಿಂಗ್ ವ್ಯವಸ್ಥೆ ಕೈ ಬಿಡಬೇಕು, ಮೋಟೇಶನ್ ಅವಧಿ ವಿಸ್ತರಿಸಬೇಕು ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗೋಣಿಬಸಪ್ಪ ಕೊರಚರ, ಶಿವಾನಂದ ನಾಯ್ಕ, ಕಾವೇರಿ ಶಿಂಧೆ, ಗೋಪಾಲ ಎಂ., ಹನುಮಂತ ಕಡಕೋಳ, ಶಿವರಾಜ ಸೂರಿನ್, ಗಿರೀಶ ರಣದೇವ,ಪವಿತ್ರಾ ಕೆ.ವಿ., ಇದ್ದರು.