ಆಸ್ಟ್ರೇಲಿಯಾ-ಭಾರತ 2ನೇ ಟೆಸ್ಟ್​: ಟಾಸ್​ ಗೆದ್ದ ಆಸಿಸ್​ ಬ್ಯಾಟಿಂಗ್​ ಆಯ್ಕೆ

ಪರ್ತ್​: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್​ ಕ್ರಿಕೆಟ್​ ಸರಣಿಯ ಎರಡನೇ ಪಂದ್ಯ ಇಂದು ಪರ್ತ್​ನಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಗಿಟ್ಟಿಸಿಕೊಂಡಿದೆ.

ನಾಲ್ಕು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಅಡಿಲೇಡ್​ ಪಂದ್ಯವನ್ನು ಗೆದ್ದು ಬೀಗಿರುವ ಭಾರತ ತಂಡ ಈ ಪಂದ್ಯವನ್ನೂ ಗೆದ್ದು ಮುನ್ನಡೆ ಸಾಧಿಸುವ ಉಮೇದಿನಲ್ಲಿದೆ. ಇತ್ತ ಆಸ್ಟ್ರೇಲಿಯ, ತವರು ನೆಲದಲ್ಲೇ ಉಂಟಾದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಇನ್ನು ಇಂದಿನ ಪಂದ್ಯದಲ್ಲಿ ಕೆಲ ಬದಲಾವಣೆಗಳೂ ಆಗಿವೆ. ನಿರೀಕ್ಷೆಯಂತೇ ಅಶ್ವಿನ್​ ಮತ್ತು ರೋಹಿತ್​ರನ್ನು ಪಂದ್ಯದಿಂದ ಕೈ ಬಿಡಲಾಗಿದೆ. ಅಶ್ವಿನ್​ ಜಾಗಕ್ಕೆ ಉಮೇಶ್​, ರೋಹಿತ್​ ಜಾಗಕ್ಕೆ ವಿಹಾರಿ ಅವರನ್ನು ನಿಯೋಜಿಸಲಾಗಿದೆ.

ಎರಡೂ ತಂಡಗಳ ಆಡುವ 11 ಬಳಗ ಹೀಗಿದೆ ನೋಡಿ