ಯೋಗದಿಂದ ಪ್ರಾಣಶಕ್ತಿ ಹೆಚ್ಚಳ

ನಾನು ತುಂಬಾ ತೆಳ್ಳಗಿದ್ದೇನೆ. ನಾನು ವೈದ್ಯರನ್ನು ಭೇೕಟಿಯಾಗಿಲ್ಲ. ನನ್ನ ಸಮಸ್ಯೆ ಪರಿಹಾರಕ್ಕೆ ಯಾವ ಯೋಗಮುದ್ರೆಗಳನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿ.

| ರಾಮವಿಲಾಸ್ 18 ವರ್ಷ

ಇಂದು ಅನೇಕರಿಗೆ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವುದೇ ದೊಡ್ಡ ಸವಾಲಾಗಿದೆ.ಈ ಸಂದರ್ಭ ನೀವು ತೆಳ್ಳಗಿರುವುದೇ ದೊಡ್ಡವರ. ನೀವು ನಿಯಮಿತ ವ್ಯಾಯಾಮ, ಯೋಗದ ಜೊತೆಗೆ ಆರೋಗ್ಯಕರ ಮತ್ತು ಪೋಷಕಾಂಶ ದಟ್ಟವಾದ ಆಹಾರವನ್ನು ಹಸಿವೆ ಆದಾಗಲೇ ಸೇವಿಸಿ. ಕಳಪೆ ಆಹಾರದಿಂದ ಜೀರ್ಣಕಾರಿ ತೊಂದರೆ, ಒತ್ತಡ, ಹಸಿವಿನ ಕೊರತೆ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತದೆ. ತೂಕ ಹೆಚ್ಚಾಗಲು ಯೋಗವನ್ನು ಶಿಫಾರಸು ಮಾಡಲಾಗಿದೆ. ಯೋಗದಿಂದ ಪ್ರಾಣಶಕ್ತಿ ಹೆಚ್ಚಾಗಿ ದೇಹವು ಬಲಗೊಳ್ಳುತ್ತದೆ. ತೂಕ ಕಡಿಮೆ ಇದೆ ಎಂಬ ಚಿಂತೆ ಬೇಡ. ಆರೋಗ್ಯ ಮುಖ್ಯ. ತೂಕ ಕಡಿಮೆ ಹೊಂದಲು ವಿವಿಧ ಕಾರಣಗಳಿವೆ. ಉದಾ: ಕುಟುಂಬದ ಇತಿಹಾಸ, ದೈಹಿಕ ಆರೋಗ್ಯ ಸಮಸ್ಯೆ ಇತ್ಯಾದಿಗಳು.

ಸೂಚಿತ ಆಸನಗಳು, ಮುದ್ರೆಗಳು: ಅರ್ಧಚಕ್ರಾಸನ, ವಜ್ರಾಸನ, ಶಶಾಂಕಾಸನ, ಮತ್ಸ್ಯಾಸನ, ಪವನಮುಕ್ತಾಸನ, ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಶವಾಸನಗಳನ್ನು ಮೂರು ತಿಂಗಳು ಸತತ ಅಭ್ಯಾಸ ಮಾಡಿ. ಅನಂತರ ಇನ್ನಷ್ಟು ಆಸನಗಳನ್ನು ಸೇರಿಸಬಹುದು. ಪೃಥ್ವಿಮುದ್ರೆ 40 ನಿಮಿಷ (ಓಂ ಶ್ರೀಂ ಭೂದೇವ್ಯೆ ೖ ನಮಃ ಎಂದು 108 ಬಾರಿ ಪಠಿಸಿ) ಹಾಗೂ ಹತ್ತು ನಿಮಿಷ ಪ್ರಾಣಮುದ್ರೆ ಮಾಡಿ.

ನನಗೆ ಸೊಂಟನೋವು, ಭುಜ ರಟ್ಟೆಯಲ್ಲಿ ನೋವು, ಎಡಪಾದದಲ್ಲಿ ನೋವು, ರಕ್ತದೊತ್ತಡ ಸಮಸ್ಯೆ ಇದೆ. ಇತ್ತೀಚೆಗೆ ಸಕ್ಕರೆ ಕಾಯಿಲೆ ಶುರುವಾಗಿದೆ. ಏರುರಸ್ತೆಯಲ್ಲಿ ನಡೆದರೆ ಬಲಭುಜ ಸೆಳೆತ ಬರುತ್ತದೆ. ವೈದ್ಯರ ಉಪಚಾರ ಪಡೆದಿದ್ದೇನೆ. ಈ ಸಮಸ್ಯೆಗೆ ಯೋಗದ ಉಪಚಾರ ತಿಳಿಸಿ.

| ಗೋಪಾಲಕೃಷ್ಣ ಹಂಪಿಹೊಳಿ ಬೆಂಗಳೂರು

ತಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೆ ಒಮ್ಮೆ ನುರಿತ ಯೋಗ ಚಿಕಿತ್ಸಕರೊಂದಿಗೆ ರ್ಚಚಿಸಿ. ನೀವು ಸತತ ಆರು ತಿಂಗಳು ಸರಳ ಯೋಗವನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡಿ. ಸ್ನಾಯುಗಳ ಉದ್ವೇಗ ಬಿಡುಗಡೆಯಾಗುತ್ತದೆ. ನಿಮ್ಮ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ಸೂಚಿತ ವ್ಯಾಯಾಮಗಳು: ಭುಜಗಳ ವ್ಯಾಯಾಮ, ಕೈಗಳನ್ನು ವಿಸ್ತರಿಸುವ ವ್ಯಾಯಾಮಗಳು, ತಿರುಚುವಿಕೆಯ ವ್ಯಾಯಾಮಗಳು, ಮಲಗಿ ಅಭ್ಯಾಸ ಮಾಡುವ ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮ, ಆಸನಗಳಲ್ಲಿ ತಾಡಾಸನ, ಪಾರ್ಶ್ವತಾಡಾಸನ, ಕಟಿಚಕ್ರಾಸನ, ಮಾರ್ಜಾಲಾಸನ, ಉತ್ಥಿತ ಏಕಪಾದಾಸನ, ಮಕರಾಸನ, ಏಕಪಾದ ಶಲಭಾಸನ, ಪರ್ವತಾಸನ, ಶವಾಸನ, ನಾಡಿಶುದ್ಧಿ ಪ್ರಾಣಾಯಾಮ ಹತ್ತು ನಿಮಿಷ ಹಾಗೂ ಹತ್ತು ನಿಮಿಷದ ಧ್ಯಾನ ಅಭ್ಯಾಸ ಮಾಡಿ.

ನಿಮಗೆ ತೀವ್ರ ನೋವು ಇದ್ದರೆ ಯೋಗಾಭ್ಯಾಸ ಬೇಡ. ಸಾಂರ್ದಭಿಕ ನೋವು ಅಥವಾ ದೀರ್ಘಕಾಲದ ನೋವು ಇರುವವರು ಬೆನ್ನುಮೂಳೆಯ ಬಲಕ್ಕೆ, ಸ್ನಾಯುಗಳನ್ನು ಹಿಗ್ಗಿಸಲು ಮತ್ತು ಬಲಪಡಿಸಲು ಸಹಾಯ ಮಾಡುವ ಕೆಲವು ಭಂಗಿಗಳಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ನಿಮಗೆ ಸಾಧ್ಯವಾಗುವ ವ್ಯಾಯಾಮ, ಯೋಗವನ್ನಾದರೂ ಅಭ್ಯಾಸ ಮಾಡಿ. ಅಧಿಕ ರಕ್ತದೊತ್ತಡ ಇದ್ದಾಗ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿ. ಧ್ಯಾನ, ಪ್ರಾಣಾಯಾಮ, ಶವಾಸನ ಅಭ್ಯಾಸ ಮಾಡಿದರೆ ಸಾಕು. ಸರಳ ಯೋಗ ಅಭ್ಯಾಸಗಳನ್ನು ಮಾಡಿದಾಗ ಮಧುಮೇಹ ಹತೋಟಿ ಆಗುತ್ತದೆ. ಆಹಾರಸೇವನೆ ಕ್ರಮವನ್ನು ಉತ್ತಮಪಡಿಸಿಕೊಳ್ಳಿ.

Leave a Reply

Your email address will not be published. Required fields are marked *