ಬಣಕಲ್: ಕ್ರೀಡೆಯಿಂದ ಮಕ್ಕಳ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಹೇಳಿದರು.
ಬಣಕಲ್ ಪ್ರೌಢಶಾಲೆಯಲ್ಲಿ ರಿವರ್‌ವ್ಯೆವ್ ಆತಿಥೇಯ ಶಾಲೆ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಪಠ್ಯ ಶಿಕ್ಷಣದಂತೆ ಕ್ರೀಡೆಯೂ ಅಗತ್ಯವಾಗಿದೆ ಎಂದರು.
ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು ಮಾತನಾಡಿ, ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಸ್ಪರ್ಧಾತ್ಮಕವಾಗಿ ಬೆಳೆಯಬಲ್ಲರು. ಕ್ರೀಡೆಗಳು ಆತ್ಮವಿಶ್ವಾಸದ ಜತೆಗೆ ನಾಯಕತ್ವ, ಹೊಣೆಗಾರಿಕೆ, ತಾಳ್ಮೆಯಂತಹ ಕೌಶಲಗಳನ್ನು ಕಲಿಸುತ್ತದೆ ಎಂದರು.
ಮಾಜಿ ಯೋಧರಾದ ಎನ್.ಟಿ.ದಿನೇಶ್ ಮತ್ತು ಹಿಲಾರಿ, ರಿವರ್‌ವ್ಯೆವ್ ಶಾಲಾ ಮುಖ್ಯಸ್ಥ ಮೊಹಮ್ಮದ್ ಇಮ್ರಾನ್, ಗ್ರಾಪಂ ಅಧ್ಯಕ್ಷೆ ಅತಿಕಾಭಾನು, ದಿಲ್‌ದಾರ್ ಬೇಗಂ, ರ್ಇಾನ್, ಸಿರಾಜುದ್ದೀನ್, ಜಾಭೀರ್,ಉತ್ತಮ್, ಬಿ.ಸಿ.ಪ್ರವೀಣ್, ಸಂಜಯ್‌ಗೌಡ, ಪಿ.ವಾಸುದೇವ್, ದಿನೇಶ್ ಶೆಟ್ಟಿ, ಶಿವರಾಮ್ ಶೆಟ್ಟಿ, ಬಿ.ಎಸ್.ವಿಕ್ರಂ, ಮದನ್ ಹೆಗ್ಡೆ, ಸೂರಿ ಬಣಕಲ್, ಮುಖ್ಯಶಿಕ್ಷಕ ಮನಮೋಹನ್ ಇತರರಿದ್ದರು.