‘ನ್ಯಾಯ’ಕ್ಕಾಗಿ ಆದಾಯ ತೆರಿಗೆ ಹೆಚ್ಚಿಸಿ ಮಧ್ಯಮವರ್ಗದವರಿಗೆ ಬರೆ ಹಾಕಲ್ಲ ಎಂದ ರಾಹುಲ್​ ಗಾಂಧಿ

ಪುಣೆ: ತಮ್ಮ ಮಹತ್ವಾಕಾಂಕ್ಷಿ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಪಡಿಸುವ ‘ನ್ಯಾಯ್​’ ಯೋಜನೆಗೆ ಅಗತ್ಯ ಹಣ ಹೊಂದಿಸಿಕೊಳ್ಳಲು ಆದಾಯ ತೆರಿಗೆ ಹೆಚ್ಚಿಸಿ ಮಧ್ಯಮ ವರ್ಗದವರಿಗೆ ಬರೆ ಹಾಕುವುದಿಲ್ಲ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪುಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಸಂವಾದ ನಡೆಸಿದ ಅವರು, ಕಡುಬಡವರಿಗೆ ಮಾಸಿಕ 6 ಸಾವಿರ ರೂ.ನಂತೆ ವಾರ್ಷಿಕ 72 ಸಾವಿರ ರೂ. ಹಣ ವರ್ಗಾವಣೆ ಮಾಡಲು ಅಗತ್ಯವಾದ ಮೊತ್ತವನ್ನು ಆದಾಯ ತೆರಿಗೆ ಹೆಚ್ಚಿಸದೆ ಹೊಂದಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಈ ಯೋಜನೆಗೆ ಹಣ ಹೊಂದಿಸಿಕೊಳ್ಳುವ ಕುರಿತು ಸಾಕಷ್ಟು ಸಮಾಲೋಚನೆ ನಡೆಸಿ ನಿಧರಿಸಲಾಗಿದೆ. ಕಾಂಗ್ರೆಸ್​ನ ಪ್ರಣಾಳಿಕೆ ಸಮಿತಿ ಸಾಕಷ್ಟು ವಿವೇಚನೆಯೊಂದಿಗೆ ಈ ಕುರಿತು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

2 Replies to “‘ನ್ಯಾಯ’ಕ್ಕಾಗಿ ಆದಾಯ ತೆರಿಗೆ ಹೆಚ್ಚಿಸಿ ಮಧ್ಯಮವರ್ಗದವರಿಗೆ ಬರೆ ಹಾಕಲ್ಲ ಎಂದ ರಾಹುಲ್​ ಗಾಂಧಿ”

Comments are closed.