ತುತುಕುಡಿ ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ, ಸ್ಟಾಲಿನ್​ ಸೋದರಿ ಕನ್ನಿಮೋಳಿ ಮನೆ ಮೇಲೆ ಐಟಿ ದಾಳಿ

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರ ಸಹೋದರಿ, ಸಂಸದೆ ಕನ್ನಿಮೋಳಿ ಅವರ ಮನೆಯ ಮೇಲೆ ಆದಾಯ ತೆರಿಗೆ (IT) ಅಧಿಕಾರಿಗಳು ಇಂದು ಸಂಜೆ ದಾಳಿ ನಡೆಸಿದ್ದಾರೆ. ಇವರು ತುತುಕುಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ.

ತಮಿಳುನಾಡಿನಲ್ಲಿ ಒಟ್ಟು 39 ಲೋಕಸಭಾ ಕ್ಷೇತ್ರಗಳಿದ್ದು ಅದರಲ್ಲಿ 18 ಕ್ಷೇತ್ರಗಳಿಗೆ ಏ.18ರಂದು ಚುನಾವಣೆ ನಡೆಯಲಿದೆ. ಈ ಮಧ್ಯೆ ಮತದಾರರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳು ಇಂದು ಸಂಜೆ ತುತುಕುಡಿಯ ಕುರಿಂಜಿ ನಗರದಲ್ಲಿರವ ಕನ್ನಿಮೋಳಿ ನಿವಾಸದಲ್ಲಿ ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಈಗಾಗಲೇ ಅಪಾರ ಪ್ರಮಾಣದ ಹಣ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆ ರದ್ದಾಗಿದೆ.

One Reply to “ತುತುಕುಡಿ ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ, ಸ್ಟಾಲಿನ್​ ಸೋದರಿ ಕನ್ನಿಮೋಳಿ ಮನೆ ಮೇಲೆ ಐಟಿ ದಾಳಿ”

  1. Election commission has done a splendid job. They should conduct such more raids all over the country.

Comments are closed.