Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಐಟಿ ರಿಟರ್ನ್ಸ್ ಫೈಲ್ ಮಾಡಿದ್ರಾ?

Monday, 16.07.2018, 3:05 AM       No Comments

| ಎನ್. ಆನಂದರಾಮ ರಾವ್

ಯಾವ ಕೆಲಸವನ್ನೇ ಆಗಲಿ, ಗಡುವಿಗಿಂತ ಸಾಕಷ್ಟು ಮುಂಚೆಯೇ ಮಾಡಿ ಮುಗಿಸುವ ಮನಸ್ಸು ಬಹಳಷ್ಟು ಜನರಿಗೆ ಇರುವುದಿಲ್ಲ. ಇನ್ನೂ ಹದಿನೈದು ದಿನ ಇದೆಯಲ್ವಾ, ಮಾಡಿದರಾಯ್ತು ಬಿಡು ಎನ್ನುವ ಮನಸ್ಥಿತಿಯಲ್ಲೇ ಇರುತ್ತಾರೆ ಬಹುತೇಕ ಜನ. ಹಾಗಾಗಿಯೇ ಪ್ರತಿ ವರ್ಷವೂ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆಯ ಕೊನೆಯ ದಿನ ರಷ್ಷೋ ರಷ್ಷು. ಬಳಿಕ ದಿನಾಂಕ ವಿಸ್ತರಣೆಗೆ ಬೇಡಿಕೆ. ಈ ಸಲ ಹಾಗಾಗದಿರಲಿ ಎಂದೇ ವಿಳಂಬ ಸಲ್ಲಿಕೆಗೆ ಭಾರಿ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರತಿ ವರ್ಷ ಮಾರ್ಚ್ 31 ಮುಗಿಯುತ್ತಿದ್ದಂತೆಯೇ ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಸಲ್ಲಿಸುವ ಗಡಿಬಿಡಿ ಆರಂಭವಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ವೈಯಕ್ತಿಕ ತೆರಿಗೆದಾರರು, ಅಂದರೆ ವೇತನದಾರರು ನಿವೃತ್ತರು ಮುಂತಾದವರು ಈ ಬಗ್ಗೆ ಆತಂಕಕ್ಕೊಳಗಾಗುವುದು ಹೆಚ್ಚು. ಸಾಮಾನ್ಯವಾಗಿ, ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಬೇಕಾಗುವ ನಂ.16ರ ಫಾಮ್ರ್ ಅನ್ನು ಜುಲೈನಲ್ಲಿ ನೀಡುತ್ತವೆ. ಹೀಗಾಗಿ ಜುಲೈ 31ರ ಅಂತಿಮ ದಿನಾಂಕ ಸಮೀಪಿಸುತ್ತಿರುವ ಹಾಗೆಯೇ ರಿಟರ್ನ್ಸ್ ಸಲ್ಲಿಕೆಯ ಧಾವಂತ ಹೆಚ್ಚಾಗುತ್ತದೆ. ಈ ಬಾರಿಯಂತೂ ರಿಟರ್ನ್ಸ್ ಸಲ್ಲಿಕೆಯನ್ನು ನಿಗದಿತ ದಿನಾಂಕದೊಳಗೆಯೇ ಕಟ್ಟುನಿಟ್ಟಾಗಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ. ಅಲ್ಲದೆ, ನಿಗದಿಪಡಿಸಿದ ಕಡೆಯ ದಿನಾಂಕಕ್ಕಿಂತ ತಡವಾಗಿ ರಿಟರ್ನ್ಸ್ ಸಲ್ಲಿಸಿದರೆ ದಂಡ ವಿಧಿಸಲು ಸಿದ್ಧವಾಗಿದೆ. ಈ ದಂಡದ ಮೊತ್ತವೂ ಕಡಿಮೆಯೇನಿಲ್ಲ. ಆಗಸ್ಟ್ 1ರಿಂದ ಡಿಸೆಂಬರ್ 31ರವರೆಗೆ ಫೈಲ್ ಮಾಡಿದರೆ 5 ಸಾವಿರ ರೂ., ಜನವರಿ 1ರಿಂದ ಮಾರ್ಚ್ 31ರವರೆಗೆ ಫೈಲ್ ಮಾಡಿದರೆ 10 ಸಾವಿರ ರೂ. ದಂಡ ವಿಧಿಸಲು ತೆರಿಗೆ ಇಲಾಖೆ ಮುಂದಾಗಿದೆ. ಹಾಗಾಗಿ, ತೆರಿಗೆದಾರರು ನಿಗದಿತ ದಿನಾಂಕದೊಳಗಾಗಿ ರಿಟರ್ನ್ಸ್ ಸಲ್ಲಿಸುವುದು ಈ ಬಾರಿ ಅಗತ್ಯ ಮತ್ತು ಅನಿವಾರ್ಯವಾಗಿದೆ.

ಆದಾಯ ತೆರಿಗೆ ಎನ್ನುವುದು ಒಬ್ಬ ವ್ಯಕ್ತಿಯು ಗಳಿಸುವ ವಾರ್ಷಿಕ ಆದಾಯದ ಮೇಲಿನ ತೆರಿಗೆ. ಫೈನಾನ್ಸ್ ಆಕ್ಟ್ ಪ್ರಕಾರ, ಆಯಾ ವರ್ಷದಲ್ಲಿ ಸರ್ಕಾರ ನಿಗದಿಪಡಿಸುವ ದರದಲ್ಲಿ ತೆರಿಗೆದಾರನ ಆದಾಯಕ್ಕೆ ತಕ್ಕಂತೆ ತೆರಿಗೆಯನ್ನು ನೀಡಬೇಕಾಗುತ್ತದೆ.

ಆದಾಯ ತೆರಿಗೆ ಆಕ್ಟ್ ಸೆಕ್ಷನ್ 14ರ ಅನ್ವಯ ಆದಾಯವನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು: 1) ಭತ್ಯೆಗಳು ಹಾಗೂ ಸಂಭಾವನೆಗಳನ್ನು ಒಳಗೊಂಡಂತೆ ವೇತನ/ ನಿವೃತ್ತಿ ವೇತನ 2) ಮನೆ ಬಾಡಿಗೆಯ ಆದಾಯ 3 ವ್ಯಾಪಾರೋದ್ಯಮ ದಿಂದ ಗಳಿಸಿದ ಲಾಭ 4) ದೀರ್ಘಾವಧಿ ಹಾಗೂ ಅಲ್ಪಾವಧಿ ಲಾಭ 5) ಬ್ಯಾಂಕ್ ಬಡ್ಡಿ, ಹೂಡಿಕೆ ಮೇಲೆ ಗಳಿಸಿದ ಬಡ್ಡಿಯ ಆದಾಯ ಇತ್ಯಾದಿ.

ಹಿರಿಯ ನಾಗರಿಕರಿಗೆ ಬ್ಯಾಂಕ್ / ಅಂಚೆ ಕಚೇರಿ, ಸಹಕಾರಿ ಸಂಘಗಳಲ್ಲಿ ಮಾಡಿರುವ ಠೇವಣಿಗಳಿಗೆ ನೀಡುವ ಬಡ್ಡಿಗೆ ಇದುವರೆಗೆ ಇದ್ದ 10,000 ರೂ.ಗಳ ವಿನಾಯಿತಿಯನ್ನು 50,000 ರೂ.ಗಳಿಗೆ ಏರಿಸಲಾಗಿದೆ. ಉಳಿತಾಯ ಖಾತೆಯ ಮೇಲಿನ ಬಡ್ಡಿಗೆ ದೊರಕುತ್ತಿದ್ದ 10,000 ರೂ.ಗಳ ವಿನಾಯಿತಿಯನ್ನು ಹಿರಿಯ ನಾಗರಿಕರಿಗೆ ಇನ್ನು ಮುಂದೆ ನೀಡಲಾಗುವುದಿಲ್ಲ. ಆರೋಗ್ಯ ವಿಮೆ, ಪ್ರೀಮಿಯಂಗೆ ಕಟ್ಟುವ 50,000 ರೂ.ಗಳವರೆಗಿನ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ಕೆಲವು ವಿಷಮ ಕಾಯಿಲೆಗಳಿಗೆ ಖರ್ಚು ಮಾಡುವ 1,00,000 ರೂ.ಗಳವರೆಗಿನ ಮೊತ್ತಕ್ಕೆ ವಿನಾಯಿತಿ ಇದೆ.

ತಪ್ಪು ಕಲ್ಪನೆ ಬೇಡ

ಫಿಕ್ಸೆಡ್ ಡಿಪಾಸಿಟ್ ಮೇಲಿನ ಬಡ್ಡಿಯನ್ನು ನೀಡುವಾಗ ಮೂಲದಲ್ಲಿ ಆದಾಯ ತೆರಿಗೆ ಕಡಿತಗೊಳಿಸಿದ್ದರೆ (ಟಿಡಿಎಸ್-ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ, ಅದು ತಪ್ಪು ಕಲ್ಪನೆ. ಗಳಿಸಿದ ಬಡ್ಡಿಗೆ ಮೂಲದಲ್ಲಿ ಆದಾಯ ತೆರಿಗೆಯನ್ನು ಕಡಿತಗೊಳಿಸುವಾಗ ಕೇವಲ 10%ನ್ನು ಮಾತ್ರ ಕಡಿತಗೊಳಿಸಲಾಗಿರುತ್ತದೆ. ಆದರೆ, ತೆರಿಗೆದಾರನು ಹೆಚ್ಚಿನ ಆದಾಯ ತೆರಿಗೆ ಪರಿಮಿತಿಗೆ ಒಳಪಟ್ಟಿದ್ದರೆ ಹೆಚ್ಚಿನ ತೆರಿಗೆ ನೀಡಬೇಕಾಗುತ್ತದೆ.

ಈ ಸಂಗತಿಗಳನ್ನು ನೆನಪಿಡಿ

ವೈಯಕ್ತಿಕ ತೆರಿಗೆದಾರರು, ವೇತನದಾರರು, ನಿವೃತ್ತರು ಮುಂತಾದವರು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಪ್ರತಿ ವರ್ಷ ಜುಲೈ 31ರೊಳಗಾಗಿ ಸಲ್ಲಿಸಬೇಕು. ತೆರಿಗೆದಾರರು ತಾವೇ ಸ್ವಂತವಾಗಿ ಆದಾಯ ತೆರಿಗೆ ರಿಟರ್ನ್ಸ್ ಫಾರಂ ಅನ್ನು ಆನ್​ಲೈನ್​ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು. ಹಾಗೆ ಮಾಡಲಾಗದವರು ತೆರಿಗೆ ಸಲಹೆಗಾರನ್ನಾಗಲಿ ಚಾರ್ಟರ್ಡ್ ಅಕೌಂಟಂಟ್​ರನ್ನಾಗಲಿ ಸಂರ್ಪಸಿ ಅವರ ಸೇವೆಯ ಸೌಲಭ್ಯ ಪಡೆಯಬಹುದು. ಅವರು ತೆರಿಗೆ ಲೆಕ್ಕಾಚಾರ ಹಾಕಲು ತೆರಿಗೆದಾರರ ಆ ವರ್ಷದ ಒಟ್ಟು ಆದಾಯವನ್ನು ನಿರ್ಧರಿಸಿ ಕಾನೂನಿನಂತೆ ವಿವಿಧ ಸೆಕ್ಷನ್​ಗಳಲ್ಲಿ ದೊರಕುವ ವಿನಾಯಿತಿಗಳನ್ನು ಪರಿಗಣನೆಗೆ ತೆಗೆದುಕೊಂಡು ತೆರಿಗೆದಾರನು ನೀಡಬೇಕಾದ ತೆರಿಗೆ ಮೊತ್ತವನ್ನು ನಿರ್ಧರಿಸುತ್ತಾರೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಈ ಕೆಳಗಿನ ಆದಾಯದ ಮೂಲವನ್ನೂ ಸಹ ತಿಳಿಸಬೇಕಾಗುತ್ತದೆ.

 

Leave a Reply

Your email address will not be published. Required fields are marked *

Back To Top