ಬೆಂಗಳೂರು ಬೆಂಗಳೂರು ನಗರದಲ್ಲಿ ನಿರಂತರವಾಗಿ ಮೇಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ (ಅ.16) ನಗರದ ಎಲ್ಲ ಶಾಲೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ.
ಹವಾಮಾನ ಇಲಾಖೆಯು ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಬೆಂಗಳೂರಿಗೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದೆ. ಮಳೆಯ ತೀವ್ರತೆ ಹೆಚ್ಚಾಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬುಧವಾರ ನಗರ ಜಿಲ್ಲೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು, ಖಾಸಗಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ೋಷಿಸಲಾಗಿದೆ. ಈ ರಜೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸಬೇಕು. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೊ, ಇಂಜಿನಿಯರಿಂಗ್, ಐಟಿಐ ತರಗತಿಗಳಿಗೆ ರಜೆ ಇರುವುದಿಲ್ಲ ಎಂದು ನಗರ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಗುರುವಾರ ಕೂಡ ರಜೆ:
ಬುಧವಾರ ಮಳೆಯಿಂದ ರಜೆ ನೀಡಿದ್ದರೆ, ಗುರುವಾರ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಇದೆ. ಎರಡು ದಿನಗಳ ಕಾಲ ರಜೆ ಸಿಗಲಿದೆ.
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅ.20ರವರೆಗೆ ಹಾಗೂ ಪದವಿ ಪೂರ್ವ ತರಗತಿಗಳಿಗೂ ಅ.19ರವರೆಗೆ ದಸರಾ ರಜೆ ನೀಡಲಾಗಿದೆ. ಉಳಿದಂತೆ ಕೇಂದ್ರ ಪಠ್ಯಕ್ರಮ ಬೋಧಿಸುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಿಗೆ ಮಾತ್ರ ಮಳೆ ರಜೆ ಆದೇಶ ಅನ್ವಯವಾಗಲಿದೆ.
ಮಂಗಳವಾರ ಬೆಳ್ಳಂಬೆಳಗ್ಗೆಯೇ ಮಳೆ ಸುರಿಯುತ್ತಿದ್ದ ಕಾರಣ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಪರದಾಡಿದರು. ಮಕ್ಕಳು ಕೂಡ ಶಾಲೆಗಳಿಗೆ ತೆರಳಲು ಹರಸಾಹಸ ಮಾಡಿದರು. ಕೆಲವು ಶಾಲೆಗಳು ಮುಂಜಾಗ್ರಜಾ ಕ್ರಮವಾಗಿ ರಜೆ ೋಷಿಸಿದ್ದವು. ಒಂದು ವೇಳೆ ಬುಧವಾರವೂ ಮಳೆ ಮುಂದುವರಿದರೆ ಮಕ್ಕಳು ಕಷ್ಟ ಪಡುವುದು ಬೇಡವೆಂಬ ಉದ್ದೇಶದಿಂದ ರಜೆ ನೀಡಲಾಗಿದೆ.