ಮದ್ದೂರು: ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ರೈತರು ಹಾಗೂ ಷೇರುದಾರರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ತಾಲೂಕಿನ ಕೊಪ್ಪದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳಿಗೆ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಸಂಘಗಳು ಅಭಿವೃದ್ಧಿ ಹೊಂದುವ ಜತೆಗೆ ರೈತರಿಗೂ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಲಿಂಗರಾಜು ಮಾತನಾಡಿ, ಕೊಪ್ಪದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 3500 ಷೇರುದಾರರು ಇದ್ದು, 10 ಕೋಟಿ ರೂ. ಬಡ್ಡಿ ರಹಿತ ಬೆಳೆ ಸಾಲ ನೀಡಲಾಗಿದೆ. 6 ಕೋಟಿ ರೂ. ಮಧ್ಯಮ ಅವಧಿ ಸಾಲ ನೀಡಲಾಗಿದೆ. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ 1 ಕೋಟಿ ರೂ. ಸಾಲ ನೀಡುವ ಜತೆಗೆ ರೈತರಿಗೆ ಸಕಾಲಕ್ಕೆ ಸಾಲ, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಪಿ.ಸಂದರ್ಶ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೊಪ್ಪದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಲಿಂಗರಾಜು, ಉಪಾಧ್ಯಕ್ಷ ಲಕ್ಷ್ಮಮ್ಮ, ನಿರ್ದೇಶಕರಾದ ಎಚ್.ಬಿ.ಶಿವಣ್ಣ, ಕೆ.ಜೆ.ಕೃಷ್ಣೇಗೌಡ, ರಾಮಕೃಷ್ಣ, ಕೆ.ರಮೇಶ, ಟಿ.ಕಾಂತರಾಜು, ಕೆ.ಜಿ.ಜಯರಾಮು, ಜಿ.ಪಿ.ಮಂಜುಳ, ಸಿಇಒ ಮಹಾದೇವು, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಇದ್ದರು.
21ಎಂಡಿಆರ್11
ಮದ್ದೂರು ತಾಲೂಕಿನ ಕೊಪ್ಪದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಕೆ.ಸಿ.ಜೋಗಿಗೌಡ, ಕೆ.ಬಿ.ಚಂದ್ರಶೇಖರ್, ಪಿ.ಸಂದರ್ಶ, ಕೆ.ಎನ್.ದಿವಾಕರ್, ಕೆ.ಲಿಂಗರಾಜು ಇದ್ದರು.
————–