More

    ಮೃಗಾಲಯದಲ್ಲಿ ಪ್ರಾಣಿ ಮನೆ ಉದ್ಘಾಟನೆ

    ‘ರಿಂಗ್ ಟೈಲ್ಡ್ ಲೆಮೂರ್’(ಎರಡು ಗಂಡು, ಮೂರು ಹೆಣ್ಣು) ಪ್ರಾಣಿಗಳಿಗೆ ಮೃಗಾಲಯದಲ್ಲಿ ನಿರ್ಮಿಸಿರುವ ಮನೆಯನ್ನು ಉದ್ಘಾಟಿಸಲಾಯಿತು.

    ಜತೆಗೆ, ಪ್ರವಾಸಿಗರ ವೀಕ್ಷಣೆಗೆ ಹೊಸ ಸದಸ್ಯ ಪ್ರಾಣಿಗಳನ್ನು ಬಿಡಲಾಯಿತು.
    ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ.ಲಿ(ಬಿಆರ್‌ಬಿಎನ್‌ಪಿಎಲ್) ಹಿರಿಯ ಪ್ರಧಾನ ವ್ಯವಸ್ಥಾಪಕ ಹರ್ಷಕುಮಾರ್ ಮನ್ರಾಲ್ ನೂತನ ಮನೆಯನ್ನು ಉದ್ಘಾಟಿಸಿ, ಬೋನ್‌ನಿಂದ ಪ್ರಾಣಿಗಳನ್ನು ವೀಕ್ಷಣಾ ಆವರಣಕ್ಕೆ ಬಿಡುಗಡೆ ಮಾಡಲು ಹಸಿರು ನಿಶಾನೆ ತೋರಿಸಿದರು.


    ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಬಿಆರ್‌ಬಿಎನ್‌ಎಂಪಿಎಲ್ ಉಪ ವ್ಯವಸ್ಥಾಪಕ ಪ್ರಮೋದ್ ಕುಮಾರ್ ಇತರರಿದ್ದರು.
    ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ.ಲಿ(ಬಿಆರ್‌ಬಿಎನ್‌ಪಿಎಲ್) ಸಂಸ್ಥೆಯು ಸಿಎಸ್‌ಆರ್ ನಿಧಿಯಲ್ಲಿ ಮೃಗಾಲಯದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಸದರಿ ಪ್ರಾಣಿ ಮನೆ ನಿರ್ಮಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts