ಸಮಾಜದಲ್ಲಿ ಎಲ್ಲರ ವಿಶ್ವಾಸ ಗೆದ್ದ ಮಾದರಿ ಸಂಸ್ಥೆ

ಪೇಜಾವರ ಶ್ರೀ ಮೆಚ್ಚುಗೆ | ಯಕ್ಷಗಾನ ಕಲಾರಂಗದ 54ನೇ ಮನೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಆರ್ಥಿಕವಾಗಿ ದುರ್ಬಲರಾದ ಕಲಾವಿದರು, ವಿದ್ಯಾರ್ಥಿಗಳು ಮತ್ತು ದಾನಿಗಳ ನಡುವೆ ವಿಶ್ವಾಸಾರ್ಹ ಸಂಪರ್ಕ ಸೇತುವಾಗಿರುವ ಉಡುಪಿಯ ಯಕ್ಷಗಾನ ಕಲಾರಂಗದ ಸೇವೆ ಅನನ್ಯವಾದುದು. ಉಳಿದ ಸಂಘಟನೆಗಳಿಗೆ ಮಾದರಿಯಾಗುವಂತೆ, ಸಮಾಜಮುಖಿಯಾಗಿ 50 ವರ್ಷಗಳನ್ನು ಉತ್ತರಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆಯಲ್ಲಿ ಸೌಕೂರು ಮೇಳದ ಯಕ್ಷಗಾನ ಕಲಾವಿದ ನಂದಕುಮಾರ ಪಾಣಾರ ಅವರಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಿಕೊಟ್ಟ ಲಲಿತಾ ಸದನ ಮನೆಯನ್ನು ಭಾನುವಾರ ಉದ್ಘಾಟಿಸಿ, ಆಶೀರ್ವಚನ ನೀಡಿದರು.

UDP-7-4B-PejavaraShree

ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.)ನ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ಉಪಸ್ಥಿತರಿದ್ದರು. ಖ್ಯಾತ ಲೆಕ್ಕಪರಿಶೋಧಕ ಕುಂದಾಪುರ ಆಚಾರ್ಯ ಕುಟುಂಬದ ವಸಂತ ಆಚಾರ್ಯ ಮತ್ತು ಶೋಭಾ ವಿ. ಆಚಾರ್ಯ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಕಲಾರಂಗ ನಿರ್ಮಿಸಿದ 54ನೇ ಮನೆ ಇದಾಗಿದೆ.

ಕಾರ್ಯಕ್ರಮದಲ್ಲಿ ಆಚಾರ್ಯ ಕುಟುಂಬದ ಸಹೋದರರಾದ ಗಣೇಶ ಆಚಾರ್ಯ, ಸುರೇಶ ಆಚಾರ್ಯ, ದಿನೇಶ್ ಆಚಾರ್ಯ ಹಾಗೂ ವಸಂತ ಆಚಾರ್ಯ ಅವರ ಪುತ್ರ ಸಿದ್ದಾರ್ಥ ಆಚಾರ್ಯ ಪಾಲ್ಗೊಂಡಿದ್ದರು. ಸೌಕೂರು ಮೇಳದ ಯಜಮಾನ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ದಾನಿಗಳಾದ ಯು.ವಿಶ್ವನಾಥ ಶೆಣೈ, ಗ್ರಾಪಂ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಮಂಡಳ್ಳಿ, ಸಂಸ್ಥೆಯ ಸದಸ್ಯರಾದ ಎಚ್.ಎನ್. ಶೃಂಗೇಶ್ವರ, ವಿಜಯಕುಮಾರ್ ಮುದ್ರಾಡಿ, ಬಿ.ಭುವನ ಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಸಂತೋಷಕುಮಾರ್ ಶೆಟ್ಟಿ, ಅಶೋಕ ಎಂ., ಎಚ್.ಎನ್. ವೆಂಕಟೇಶ್, ಗಣೇಶ್ ಬ್ರಹ್ಮಾವರ, ಡಾ. ರಾಜೇಶ್ ನಾವುಡ ಇತರರಿದ್ದರು.

MALYADI_CLICKK

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್ ವಂದಿಸಿದರು.

Share This Article

ಬಿಳಿ vs ಗುಲಾಬಿ: ಯಾವ ಬಣ್ಣದ ಡ್ರ್ಯಾಗನ್​ ಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dragon fruit

ಡ್ರ್ಯಾಗನ್​ ಫ್ರೂಟ್ಸ್ ( Dragon fruit ) ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲೇ ತನ್ನದೇಯಾದ…

International Coffee Day : ಬೆಕ್ಕಿನ ಮಲದಿಂದ ತಯಾರಿಸುವ ಬಿಸಿ ಬಿಸಿ ‘ಕಾಫಿ’ ಗೆ ಭಾರಿ ಡಿಮ್ಯಾಂಡ್​​….

ಬೆಂಗಳೂರು: (International Coffee Day )  ಕಾಫಿಯ  ( Coffee ) ಕ್ರೇಜ್  ಎಷ್ಟರ ಮಟ್ಟಿಗೆ…

Life Partner Secrets : ನಿಮ್ಮ ಹೆಂಡ್ತಿಯ ಮುಂದೆ ಈ ವಿಚಾರ ಮುಚ್ಚಿಟ್ರೆ ಕಾದಿದೆ ಅಪಾಯ!

ಬೆಂಗಳೂರು: ದಾಂಪತ್ಯ ಎನ್ನುವುದು ಸುಂದರವಾದ ಬಂಧವಾಗಿದೆ. ದಂಪತಿಗಳ ಮಧ್ಯೆ ಪ್ರೀತಿ, ಹೊಂದಾಣಿಕೆ ಮುಖ್ಯವಾಗಿದೆ. ಚಾಣಕ್ಯನ ನೀತಿಶಾಸ್ತ್ರದಲ್ಲಿ…