More

    ಜ.14 ರಿಂದ ’ಶ್ರೀ ಕೃಷ್ಣ ಗೋಶಾಲೆ’ ಆರಂಭ

    ಮಡಿಕೇರಿ: ಶ್ರೀ ವಿಶ್ವಕರ್ಮ ಸಮುದಾಯ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಗೋ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಜ.೧೪ ರಿಂದ ತಾತ್ಕಾಲಿಕವಾಗಿ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ’ಶ್ರೀ ಕೃಷ್ಣ ಗೋಶಾಲೆ’ ಆರಂಭಿಸಲಾಗುವುದು ಎಂದು ಟ್ರಸ್ಟ್‌ನ ರಾಜ್ಯಾಧ್ಯಕ್ಷ ಹರೀಶ್ ಆಚಾರ್ಯ ತಿಳಿಸಿದ್ದಾರೆ.

    ಮಡಿಕೇರಿ ನಗರ ಸೇರಿದಂತೆ ಕೊಡಗಿನ ಕೆಲವು ಪ್ರದೇಶಗಳಲ್ಲಿ ಬೀಡಾಡಿ ಹಸುಗಳು, ಕೋಣಗಳು, ಎಮ್ಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಜೀವಿಗಳಿಗೆ ನೆಲೆ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ’ಶ್ರೀ ಕೃಷ್ಣ ಗೋ ಶಾಲೆ’ ಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಸಲಹೆಗಾರ ಪಳಂಗಂಡ ಈಶ್ವರ್, ಟಿ.ಎಲ್.ಅಶೋಕ್, ಎ.ಜಿ.ವಸಂತ್ ಕುಮಾರ್, ಇ.ಎಲ್.ಅಶೋಕ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts