More

    ಚಿಕ್ಕಮಗಳೂರಲ್ಲಿ ಸ್ಪದರ್ಶನ ಭವನ ಉದ್ಘಾಟನೆ 27ಕ್ಕೆ

    ಚಿಕ್ಕಮಗಳೂರು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಕಳಸಾಪುರದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಪದರ್ಶನ ಭವನದ ಉದ್ಘಾಟನಾ ಸಮಾರಂಭ ಅ.27ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯಕ್ಕ ತಿಳಿಸಿದರು.
    ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ಸದ್ಬಾವನಾ ಶಾಂತಿಯಾತ್ರೆ ನಡೆಯಲಿದೆ. ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ 1936ರಲ್ಲಿ ಸ್ವಯಂ ನಿರಾಕಾರ ಪರಮಪಿತ ಪರಮಾತ್ಮ ಪಿತಾಶ್ರೀ ಪ್ರಜಾಪಿತ ಬ್ರಹ್ಮಾ ಅವರ ಮೂಲಕ ಸ್ಥಾಪಿತವಾಯಿತು. ಸಂಸ್ಥೆಯ ಪ್ರಧಾನ ಕೇಂದ್ರ ರಾಜಸ್ಥಾನದ ಮೌಂಟ್‌ಅಬುನಲ್ಲಿದೆ. ಸಂಸ್ಥೆ 21 ವರ್ಗಗಳ ಮೂಲಕ ವಿಶ್ವದಾದ್ಯಂತ 147ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. 10ಸಾವಿರಕ್ಕೂ ಹೆಚ್ಚು ಸೇವಾಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.
    ಸಂಸ್ಥೆಯ ಶಾಖೆಯು 2016ರ ಏ.10ರಂದು ಕಳಸಾಪುರದಲ್ಲಿ ಪ್ರಾರಂಭವಾಯಿತು. ಸಂಸ್ಥೆಯ ಸೇವಾ ಕಾರ್ಯಗಳು ಅಲ್ಲಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಶ್ವರೀಯ ಜ್ಞಾನ ಹಾಗೂ ರಾಜಯೋಗ ಶಿಕ್ಷಣ ನೀಡಿ ಅವರ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತರಲಾಗುತ್ತಿದೆ. ಇದುವರೆಗೆ ಕಳಸಾಪುರದಲ್ಲಿ ಶಾಖೆಯು ಬಾಡಿಗೆ ಕಟ್ಟಡದಲ್ಲಿದ್ದು ಸೇವೆ ನಿರಂತರವಾಗಿ ಮಾಡುತ್ತ ಸರ್ವರ ಸಹಯೋಗದಿಂದ ಈಗ ಹೊಸ ಸೇವಾ ಕಚೇರಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
    ಜಿಲ್ಲೆಯ ಹೌಸಿಂಗ್ ಬೋರ್ಡ್, ಆನಂದ ಸರೋವರ ಕೋಟ್ ಕೊಪ್ಪ, ಕಳಸ, ಮೂಡಿಗೆರೆ, ಎನ್.ಆರ್.ಪುರ, ಸಖರಾಯಪಟ್ಟಣ, ಅಜ್ಜಂಪುರ, ತರೀಕೆರೆ, ಲಿಂಗದಹಳ್ಳಿ, ಅಮೃತಾಪುರ, ಬೆಟ್ಟದಹಳ್ಳಿ, ಬರ್ಗೇನಹಳ್ಳಿ, ಕಳಸಾಪುರ, ಚೌಳಹಿರಿಯೂರು, ಕಡೂರು, ಬೀರೂರಿನಲ್ಲಿ ಸೇರಿ ಒಟ್ಟು 21 ಸೇವಾಕೇಂದ್ರಗಳಿದ್ದು ಸ್ವಂತ ಕಟ್ಟಡದಲ್ಲಿ ಸೇವೆ ಸಲ್ಲಿಸುತ್ತಿವೆ. ಶೃಂಗೇರಿ, ಬಾಳೆಹೊನ್ನೂರಿನಲ್ಲಿ ಬಾಡಿಗೆ ಕಟ್ಟಡವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts