More

  ಸಿದ್ದಾಪುರದಲ್ಲಿ ಸಲಫಿ ಮಸೀದಿ ಉದ್ಘಾಟನೆ

  ಸಿದ್ದಾಪುರ: ಸಿದ್ದಾಪುರದಲ್ಲಿ ನಿರ್ಮಾಣಗೊಂಡಿರುವ ಸಲಫಿ ಮಸೀದಿಯನ್ನು ವಿಸ್ಡಂ ಇಸ್ಲಾಮಿಕ್ ಆರ್ಗನೈಸೇಷನ್ ಕಮಿಟಿಯ ರಾಜ್ಯ ಉಪಾಧ್ಯಕ್ಷ ಕುಂಞಿ ಮುಹಮ್ಮದ್ ಮದನಿ ಪರಪ್ಪೂರ್ ಗುರುವಾರ ಉದ್ಘಾಟಿಸಿದರು.

  ನಂತರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮೌಢ್ಯಗಳಿಂದ ದೂರವಿದ್ದು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುವುದರೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

  ಮೊಜಾ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಎಂ. ಸಮೀರ್, ಸೂಕೂರ್, ಪ್ರಮುಖರಾದ ಟಿ.ಕೆ. ಅಶ್ರಫ್, ಸಿ.ಪಿ.ಸಲೀಂ, ಶಿಹಾಬ್ ಎಡಕ್ಕ್ರ್, ಅಬ್ದುಲ್ಲ ಫಾಸಿಲ್, ಇಸ್ಮಾಯಿಲ್ ಕಿಣವಕ್ಕಲ್, ನಿಶಾದ್ ಸ್ವಲಾಹಿ, ರಾಜಾನ್, ಮುಸ್ತಫಾ, ಅಬ್ದುಲ್ ಶುಕೂರ್, ಅನ್ಸಾರಿ, ಅಬ್ದುಲ್ ರಿಯಾಜ್, ಕಾರ್ಮಿಕ ಸಂಘಟನೆಯ ಮುಖಂಡ ಎನ್.ಡಿ.ಕುಟ್ಟಪ್ಪ ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts