ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿಯಲ್ಲಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದಿಂದ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಆರ್‌ಎಸ್‌ಬಿ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಅ.23ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಸುಮಾ ರಾಮಚಂದ್ರ ಬೋರ್ಕಾರ್ ಹೇಳಿದರು.
ಗೋವಾದ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿ ಮತ್ತಿತರರು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭವನದ ವೇದಿಕೆಗೆ ಪ್ರಮುಖ ದಾನಿಗಳಾದ ವಿಶ್ವೇಶ್ವರ ಕಾಮತ್ ಹೆಸರು, ಭೋಜನ ಶಾಲೆಗೆ ಸಂಘದ ಸ್ಥಾಪಕ ಅಧ್ಯಕ್ಷ ರಾಮಚಂದ್ರ ಬೋರ್ಕಾರ್ ಹೆಸರಿಡಲು ತೀರ್ಮಾನಿಸಲಾಗಿದೆ. ಕಟ್ಟಡ ನಿರ್ಮಾಣದಲ್ಲಿ ಸಮಾಜದವರ ಮತ್ತು ಸಂಘದ ಗೌರವಾಧ್ಯಕ್ಷ, ಉದ್ಯಮಿ ನಟರಾಜ ಕಾಮತ್ ಅವರ ಪೂರ್ಣ ಪ್ರಮಾಣದ ನೆರವು ಇದೆ. ಲೋಕಸಭಾ ಸದಸ್ಯರು, ಸ್ಥಳೀಯ ಶಾಸಕರ ನೆರವಿನಿಂದ ನೀರಾವರಿ ನಿಗಮದಿಂದ ದೊರೆತ 50 ಲಕ್ಷ ರೂ. ಅನುದಾನ ನೆರವಿಗೆ ಬಂದಿದೆ ಎಂದರು.
ಸಂಘದ ಕಾರ್ಯದರ್ಶಿ ಅಶೋಕ್ ನಾಯಕ್, ಸಹ ಕಾರ್ಯದರ್ಶಿ ಎಚ್.ಎನ್.ರಾಘವೇಂದ್ರ, ನಿರ್ದೇಶಕರಾದ ವಿಶ್ವನಾಥ ಪ್ರಭು, ರಾಘವೇಂದ್ರ ನಾಯಕ್, ಟಿ.ಎಂ.ರಾಘವೇಂದ್ರ, ಸುಧಾ ಸುರೇಶ್, ರಾಘವೇಂದ್ರ ನಾಯಕ್ ಇತರರಿದ್ದರು.