ಕುಣಿತ ಭಜನೆಯೂ ದೇವರ ಪೂಜೆಯ ಅಂಗ

ಪುತ್ತಿಗೆ ಸುಗುಣೇಂದ್ರ ಶ್ರೀ ಆಶೀರ್ವಚನ | ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಹಿಂದಿನ ಕಾಲದಿಂದಲೂ ಕುಣಿತ ಭಜನಾ ಸೇವೆ ಚಾಲ್ತಿಯಲ್ಲಿದ್ದು, ದೇವರ ಅಷ್ಟಾಂಗ ಪೂಜೆಯಲ್ಲಿ ಒಂದಾಗಿತ್ತು. ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಅದು ಮಂಕಾಗಿದ್ದು, ಮತ್ತೆ ಈ ಸೇವೆ ಹಾಗೂ ಪ್ರಚಾರ ಹೆಚ್ಚಾಗಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿಯ ರಾಜಾಂಗಣದಲ್ಲಿ ಹಮ್ಮಿಕೊಂಡಿರುವ ಶ್ರೀಕೃಷ್ಣ ಮಾಸೋತ್ಸವದಲ್ಲಿ ಸೋಮವಾರದಿಂದ ಶನಿವಾರದ ವರೆಗೆ ನಡೆಯಲಿರುವ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಕಲೆಯ ರಕ್ಷಣೆಯಾಗಲಿ

ದೇವರ ಪೂಜೆಯ ಸಂದರ್ಭದಲ್ಲಿ ನೃತ್ಯ ಸಮರ್ಪಣೆಯ ಸೇವೆ ಇರುತ್ತಿತ್ತು. ಆದರೆ, ಇದಕ್ಕೆಲ್ಲ ಜನರು ಲಭಿಸದ ಕಾರಣದಿಂದ ಪೂಜೆಯ ಸಂದರ್ಭದಲ್ಲಿ ನೀರು ಬಿಟ್ಟು ಎಲ್ಲ ಬಗೆಯ ಸೇವೆ ಆಯಿತೆಂದು ಪೂಜೆ ಮಾಡಲಾಗುತ್ತಿದೆ. ನಶಿಸುತ್ತಿರುವ ಈ ಕಲೆಯ ರಕ್ಷಣೆ ಆಗಬೇಕು. ಜನ್ಮಾಷ್ಟಮಿಗೆ ಶ್ರೀಕೃಷ್ಣನನ್ನು ಸ್ವಾಗತಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

UDP-5-1A-Bhajana
ಪುತ್ತಿಗೆ ಸುಗುಣೇಂದ್ರ ಶ್ರೀಗಳು ತಾಳ ತಟ್ಟುತ್ತ ಕುಳಿತು ತಂಡಕ್ಕೆ ಪ್ರೋತ್ಸಾಹ ನೀಡಿದರು.

ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ಡಾ. ಚಂದನ್​ ಶೆಟ್ಟಿಗಾರ್​, ಅವಿನಾಶ್​ ಶೆಟ್ಟಿಗಾರ್​, ಸರೋಜಾ ಯಶವಂತ್​, ಪ್ರೇಮಾನಂದ ಶೆಟ್ಟಿಗಾರ್​, ದಿನೇಶ್​ಕುಮಾರ್​, ಅಶೋಕ ಶೆಟ್ಟಿಗಾರ್​, ರವೀಂದ್ರ ಆಚಾರ್ಯ ಇತರರಿದ್ದರು.

ನೇತ್ರಾವತಿ ಮತ್ತು ಬಳಗ ಪ್ರಾರ್ಥಿಸಿದರು. ಉಡುಪಿಯ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್​ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುರಾಧಾ ಉದಯ್​ ಕಾರ್ಯಕ್ರಮ ನಿರೂಪಿಸಿದರು.

ತಾಳ ತಟ್ಟಿ ಪ್ರೋತ್ಸಾಹಿಸಿದ ಪರ್ಯಾಯ ಶ್ರೀ

ಶ್ರೀರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿಯ ಮಹಿಳಾ ತಂಡದ ‘ಪುಟ್ಟ ಬಾಲನೆ ಮಣಿ ಕಟ್ಟಿಲಾಡೋ..’ ಹಾಡಿನ ಪ್ರಥಮ ಕುಣಿತ ಭಜನೆ ವೀಕ್ಷಿಸಿದ ಪುತ್ತಿಗೆ ಶ್ರೀಗಳು, ತಾಳ ತಟ್ಟುತ್ತ ಕುಳಿತು ತಂಡಕ್ಕೆ ಪ್ರೋತ್ಸಾಹ ನೀಡಿದರು. ಆ. 10ರ ವರೆಗೆ ನಡೆಯಲಿರುವ ಸ್ಪರ್ಧೆಯಲ್ಲಿ ಪ್ರತಿದಿನ 4 ತಂಡಗಳು ಪಾಲ್ಗೊಳ್ಳಲಿವೆ.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…