ಹುಮನಾಬಾದ್: ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪಕ್ಷಭೇದವಿಲ್ಲದೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಪುರಸಭೆಯಲ್ಲಿ ಸೋಮವಾರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಜನರಿಂದ ಆರಿಸಿ ಬಂದ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಿದ್ದು, ನಿಮ್ಮ ಮೇಲೆ ಜವಾಬ್ದಾರಿ ಇದೆ. ವಾರ್ಡ್ಗಳ ಸಮಸ್ಯೆಗೆ ಸ್ಪಂದಿಸುವ ಜತೆ ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್ ದೀಪ ಸೌಲಭ್ಯಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು.
೧೫ನೇ ಹಣಕಾಸು ಯೋಜನೆ ಸೇರಿ ಇತರೆ ಅನುದಾನದಲ್ಲಿ ಅವಶ್ಯಕತೆ ಇರುವ ಕಾಮಗಾರಿ ತೆಗೆದುಕೊಳ್ಳಲು ಪುರಸಭೆಗೆ ಸಂಪೂರ್ಣ ಅಧಿಕಾರವಿದೆ. ಈ ಮೂಲಕ ಉತ್ತಮ ಕೆಲಸ ನಿರ್ವಹಿಸಿ ಜನರ ವಿಶ್ವಾಕ್ಕೆ ಪಾತ್ರರಾಗಬೇಕು. ಸಂಬಂಧಿತ ಅಧಿಕಾರಿಗಳು ಖುದ್ದಾಗಿ ವಾರ್ಡ್ ಗಳಿಗೆ ಭೇಡಿ ನೀಡುವುದರಿಂದ ಜನರ ಸಮಸ್ಯೆಗೆ ಸ್ಪಂದನೆ ದೊರೆಯಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಪುರಸಭೆ ಅಧ್ಯಕ್ಷೆ ಪಾರ್ವತಿಬಾಯಿ ಶೇರಿಕಾರ, ಉಪಾಧ್ಯಕ್ಷ ಮುಕ್ರಂ ಝಾ, ಮಾಜಿ ಅಧ್ಯಕ್ಷ ವೀರಣ್ಣ ಪಾಟೀಲ್, ಪ್ರಕಾಶ ಬತಲಿ, ಗುಜ್ಜಮ್ಮರೆಡ್ಡಿ, ಕಸ್ತೂರಬಾಯಿ ಪರಸನೂರ, ನೀತು ಶರ್ಮಾ, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಮಾಜಿ ಸದಸ್ಯ ಕೇಶವರಾವ ತಳಘಟಕರ, ಕಾಂಗ್ರೆಸ್‌ನ ಪ್ರಮುಖರಾದ ದತ್ತಕುಮಾರ ಚಿದ್ರಿ, ಮಹೇಶ ಅಗಡಿ, ಶಿವರಾಜ ಚೀನಕೇರಾ, ಲಕ್ಷ್ಮೀಪುತ್ತ ಮಾಳಗೆ, ಶ್ರೀಮಂತ ಪಾಟೀಲ್, ಹುಲೇಪ್ಪ ಪವಿತ್ರ, ಓಂಕಾರ ತುಂಬಾ, ಪುರಸಭೆ ಸದಸ್ಯರಾದ ಅಫ್ಸರ್‌ಮಿಯಾ, ಎಸ್.ಎ.ಬಾಸೀದ್, ಅನಿಲ ಪಲ್ಲೇರಿ, ದತ್ತು ಪರೀಟ್, ಗುಂಡಪ್ಪ ಇತರರಿದ್ದರು. ಸವಿತಾ ಅಶೋಕ ಸೊಂಡೆ ಸ್ವಾಗತಿಸಿ ನಿರೂಪಣೆ ಮಾಡಿದರು.