ಬಸವಕಲ್ಯಾಣ: ಜಾತಿ ಸಮುದಾಯ ಎನ್ನದೇ, ಯಾವುದೇ ಭೇದ, ಭಾವ ಮಾಡದೇ ಸಂಘಟಿತರಾಗಬೇಕು. ನಾವೆಲ್ಲರೂ ಒಂದು ಎನ್ನುವ ಭಾವನೆ ಬೆಳೆಯಬೇಕು ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಕಾಳಿ ಗಲ್ಲಿಯಲ್ಲಿಯ ಕಾಳಿಕಾಮಾತಾ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದು ಪರಿಷತ್ ಸಪ್ತಾಹ ದಿವಸದ ಷ್ಷಷ್ಠಿಪೂರ್ತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ನಾವೆಲ್ಲರು ಹಿಂದು, ನಾವೆಲ್ಲ ಬಂಧು, ನಾವೆಲ್ಲ ಒಂದು ಎನ್ನುವ ಮೂಲಕ ಸಂಘಟಿತರಾಗಬೇಕು ಎಂದರು.
ಕಲಬುರಗಿ ಜಿಲ್ಲಾ ಗೋರಕ್ಷಾ ಪ್ರಮುಖ, ಬೌದ್ಧಿಕ ಶೇಷಾದ್ರಿ ಕುಲಕರ್ಣಿ ಮಾತನಾಡಿ, ಶ್ರೀ ಕೃಷ್ಣ ಜನ್ಮದಿನದಂದೇ ವಿಶ್ವ ಹಿಂದು ಪರಿಷತ್ ಜನ್ಮ ತಾಳಿದ್ದು, ಜಗತ್ತಿನ ನಾನಾ ಕಡೆ ಹಾಗೂ ಭಾರತದ ಮೂಲೆ ಮೂಲೆಯಲ್ಲಿಯೂ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಆಚಾರ ವಿಚಾರಗಳನ್ನು ರಕ್ಷಣೆ ಮಾಡುವ ಮೂಲಕ ಎಲ್ಲರನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.
ಗ್ರಾಮ ವಿಕಾಸ ಸಮಿತಿ ವಿಭಾಗೀಯ ಸಂಯೋಜಕ ಡಾ.ಮಹೇಶ ಪಾಟೀಲ್ ಮಾತನಾಡಿದರು. ಶ್ರೀ ಬಸವರಾಜ ಮಹಾರಾಜ ಸಮ್ಮುಖ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸತೀಶ ನೌಬಾದೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಪ್ರಧಾನ ಕಾರ್ಯದರ್ಶಿ ರವಿ ಸಕಟ್, ಸಹ ಕಾರ್ಯದರ್ಶಿ ಕಮಲಜೀತ ಸಿಂಗ್ ಚವ್ಹಾಣ್, ಧರ್ಮ ಪ್ರಚಾರಕ ರಮೇಶ ಹಿರೇಮಠ, ಪ್ರಕಾಶ ನಿರಾಳೆ, ಬಜರಂಗದಳ ಸಂಯೋಜಕ ರವಿ ನಾವದ್ಗೇಕರ, ಸಹ ಸಂಯೋಜಕ ಶ್ರೀನಿವಾಸ ಬಿರಾದಾರ, ಸಚಿನ ಗರುಡ, ಸುರಕ್ಷಾ ಪ್ರಮುಖ ಸಚಿನ ಸೂರ್ಯವಂಶಿ, ಗೋರಕ್ಷಾ ಪ್ರಮುಖ ವಿನೋದ ಬಡಗೇಕರ, ಅಜಯ ಗೌಳಿ, ಮಹಿಳಾ ಮೋರ್ಚಾ ನಗರ ಅಧ್ಯಕ್ಷ ಸುರೇಖಾ ಅನ್ವಲೆ, ರಾಜಕುಮಾರ ಮರಮಂಚೆ, ಸುನೀಲ ಮೆಕಾಲೆ, ನಾಗರಾಜ ಭಂಡಾರಿ, ಶ್ರೀಧರ ಮುತ್ತೆ, ಗುರು ಪವಾಡೆ ಇದ್ದರು.