ಕಲ್ಪತರು ಸಹಕಾರಿ ಸೌಧ ಉದ್ಘಾಟನೆ

Kdb_Kalpataru

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಿರಾಡಿ ಶಾಖೆಯ ನೂತನ ಕಟ್ಟಡ ‘ಕಲ್ಪತರು ಸಹಕಾರಿ ಸೌಧ’ ಅ.7ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಉಮೇಶ್ ಶೆಟ್ಟಿ, ಉಪಾಧ್ಯಕ್ಷ ಕಮಲಾಕ್ಷ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಯಂ ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 7 ಗ್ರಾಮಗಳ ವ್ಯಾಪ್ತಿ ಹೊಂದಿದ್ದು 6259 ಸದಸ್ಯರಿದ್ದು, 873 ಲಕ್ಷ ರೂ.ಪಾಲು ಬಂಡವಾಳ, 29.82 ಕೋಟಿ ರೂ.ಠೇವಣಿ ಹೊಂದಿದೆ. ಡಿಸಿಸಿ ಬ್ಯಾಂಕ್‌ನಿಂದ 61.69 ಕೋಟಿ ರೂ. ಸಾಲ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ 79.99 ಕೋಟಿ ಆಗಿರುತ್ತದೆ. ಕೃಷಿ ಸಾಲಗಾರ ರೈತರಿಗೆ ಬೆಳೆ ವಿಮೆ ಯೋಜನೆಯ ಸೌಲಭ್ಯ ಅಳವಡಿಸಲಾಗಿದೆ. ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಹಾಗೂ ಇನ್ನಿತರ ಸಂಘ-ಸಂಸ್ಥೆಗಳಿಗೆ ಸಾಲ ವಿತರಿಸುತ್ತಿದೆ. ಸಂಘ ಸದಸ್ಯರಿಗೆ ಬಡ್ಡಿ ರಹಿತ ಕೃಷಿ ಸಾಲ, ಕೃಷಿಯೇತರ ಸಾಲ, ರಸಗೊಬ್ಬರ ಮಾರಾಟ, ಪಡಿತರ ವಿತರಣೆ ಮಾಡುತ್ತಿದೆ. ಪ್ರಸಕ್ತ ವರ್ಷ ಶೇ.100 ಸಾಲ ವಸೂಲಾತಿ ಮಾಡಿದೆ. ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

1973ರಲ್ಲಿ ಶಿರಾಡಿ ಶಾಖೆಯು ಆರಂಭಗೊಂಡಿದ್ದು, ಬಾಡಿಗೆ ಕಟ್ಟಡದಲ್ಲಿತ್ತು. ಶಿರಾಡಿ ಶಾಖೆಗೆ 1.52 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಲ್ಪತರು ಸಹಕಾರಿ ಸೌಧ 6037 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಬ್ಯಾಂಕಿನ ಕಚೇರಿ, ಭದ್ರತಾ ಕೊಠಡಿ, ನ್ಯಾಯಬೆಲೆ ಅಂಗಡಿ, ಕ್ಯಾಂಪ್ಕೋ ಖರೀದಿ ಕೇಂದ್ರ, ರಸಗೊಬ್ಬರ ಗೋದಾಮು, ವಸತಿ ಸಂಕೀರ್ಣ ಒಳಗೊಂಡಿದೆ.

ಕಲ್ಪತರು ಸಹಕಾರಿ ಸೌಧವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಶಾಖಾ ಕಚೇರಿ, ಇನ್ನೋರ್ವ ನಿರ್ದೇಶಕ ಜಯರಾಮ ರೈ ಎಸ್.ಬಿ.,ಅವರು ಭದ್ರತಾ ಕೊಠಡಿ, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಹೆಚ್.ಎನ್.ಅವರು ನ್ಯಾಯಬೆಲೆ ಅಂಗಡಿ, ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಕ್ಯಾಂಪ್ಕೋ ಖರೀದಿ ಕೇಂದ್ರ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ರಸಗೊಬ್ಬರ ಗೋದಾಮು ಉದ್ಘಾಟಿಸಲಿದ್ದಾರೆ. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ. ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಎಸ್.ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Share This Article

Raw Milkನಿಂದ ಹೊಳೆಯುವ ತ್ವಚೆ! ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ ಸಾಕು..

Raw Milk Beauty Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಲು…

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…