ಬಸವಕಲ್ಯಾಣ: ರಾಷ್ಟ್ರೀಯ ಹೆದ್ದಾರಿ ೬೫ರ ಹಳ್ಳಿ ಗ್ರಾಮದ ಸಮೀಪ ಜಿಯೋ-ಬಿಪಿಯ ಜೆ.ಎಸ್. ಹೊಳಕುಂದೆ ಪೆಟ್ರೋಲಿಯಂ ಶನಿವಾರ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.
ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಮುಖರಾದ ವಿಠ್ಠಲರಾವ ಬದೋಲೆ ಇತರರು ಬಂಕ್ ಮಾಲೀಕರಿಗೆ ಶುಭ ಕೋರಿದರು.
ರಿಲಾಯನ್ಸ್-ಬಿಪಿ ಮೊಬಿಲಿಟಿಯ ರಾಜ್ಯ ಮುಖ್ಯಸ್ಥ ವಿಪಿನ್ ಸಾಪ್ರೆ ಪ್ರಾಸ್ತಾವಿಕ ಮಾತನಾಡಿ, ಜಿಯೋ-ಬಿಪಿ ವಿಶೇಷತೆ ಮತ್ತು ಅನುಕೂಲದ ಬಗ್ಗೆ ಮಾಹಿತಿ ನೀಡಿದರು.
ಬಂಕ್ ಮಾಲೀಕರಾದ ಸುಭಾಷ ಹೊಳಕುಂದೆ, ಜಿಯೋ ಬಿಪಿಯ ಗೋಪಾಲಕೃಷ್ಣ ಭಟ್ಟ, ಪ್ರಮುಖರಾದ ಬಿ.ಜಿ. ಶಟಗಾರ, ಚಂದ್ರಕಾಂತ ಮುಸ್ತಾಪುರೆ, ಡಾ.ವಿಜಯಕುಮಾರ ಅಂತಪ್ಪನವರ, ಡಾ.ಪವನ ಪಾಟೀಲ್, ಸುಜೀತ್ ಹೊಳಕುಂದೆ, ಸುನೀಲ ಹೊಳಕುಂದೆ, ಬಸವಕಲ್ಯಾಣ ಇಂಜಿನಿಯರ‍್ಸ ಸಂಘದ ಅಧ್ಯಕ್ಷ ಬಸವರಾಜ ಮುಸ್ತಾಪುರೆ ಇತರರಿದ್ದರು.