ಸಕಾರಾತ್ಮಕ ಚಿಂತನೆಗಾಗಿ ಪ್ರವಚನ ಆಲಿಸಿ

ಕಮಲನಗರ: ನಮ್ಮ ಜೀವನದಲ್ಲಿ ಅನೇಕ ದ್ವಂದ್ವಗಳಿವೆ. ಜೀವನ ಬೇಸರವಾಗುವಷ್ಟು ವಿಷಮ ಪರಿಸ್ಥಿತಿಗಳು ಎದುರಾಗುತ್ತವೆ. ವಚನಗಳ ಅಧ್ಯಯನದಿಂದ ಶರಣರ ದರ್ಶನ ಲಭಿಸುತ್ತದೆ. ಅಧ್ಯಾತ್ಮ ಮತ್ತು ಲೌಕಿಕಗಳ ಸಮನ್ವಯ ದರ್ಶನವಾಗುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ, ಚೈತನ್ಯದ ಚಿಲುಮೆಯನ್ನು ಹೊತ್ತಿಸುವುದೇ ಪ್ರವಚನದ ಉದ್ದೇಶ ಎಂದು ಮುಖಂಡ ಪ್ರಕಾಶ ಟೊಣ್ಣೆ ಹೇಳಿದರು.

ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಲ್ಲಿ ಸೋಮವಾರ ಸಂಜೆ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಒಂದು ತಿಂಗಳವರೆಗೆ ನಡೆಯುವ ಶರಣರ ವಚನಗಳಲ್ಲಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರ, ಸಂತರ, ದಾರ್ಶನಿಕರ ನುಡಿಗಳು ಕತ್ತಲ ಮನೆಗೆ ದೀವಟಿಗಳಂತೆ. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವುಗಳು ನಂದಾದೀಪದಂತೆ ನಮ್ಮ ಬದುಕನ್ನು ಬೆಳಗುತ್ತವೆ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಹೊಟ್ಟೆ ಹಸಿದವನಿಗೆ ಅನ್ನವನಿಕ್ಕುವವನು, ಬಾಯಾರಿದವನಿಗೆ ನೀರು ಕೊಡುವವನಲ್ಲಿ ದೇವರನ್ನು ಕಾಣಬೇಕು. ಅದನ್ನು ಬಿಟ್ಟು ಕಲ್ಲು ನಾಗರಕ್ಕೆ ಹಾಲೆರೆಯುವುದು ಅವೈಜ್ಞಾನಿಕ. ಇದನ್ನು ೧೨ನೇ ಶತಮಾನದಲ್ಲೇ ಶರಣರು ತೀವ್ರವಾಗಿ ಖಂಡಿಸಿದ್ದಾರೆ ಎಂದರು.

ಪ್ರವಚನಕಾರ ಡಾ.ಸಂಜೀವಕುಮಾರ ಜುಮ್ಮಾ ಮಾತನಾಡಿದರು.

ಶರಣ ರಾಚಪ್ಪ ಪಾಟೀಲ್, ಪ್ರವಚನ ಸಮಿತಿ ಅಧ್ಯಕ್ಷ ಪ್ರಭುರಾವ ಕಳಸೆ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಶರಣಪ್ಪ ಚಿಕಮುರ್ಗೆ, ಅಮರ ಶಿವಣಕರ, ರಮೇಶ ಬಿರಾದಾರ, ಅವಿನಾಶ ಶಿವಣಕರ, ಸುರೇಶ ಸೊಲ್ಲಾಪುರೆ, ಜೀತೇಂದ್ರ ಮಹಾಜನ, ಕಲ್ಲೇಶ ಉದಗಿರೆ, ಮಹಾದೇವ ಬಿರಾದಾರ, ಅಜಿತ್ ರಾಗಾ, ಶಾಮರಾವ ಬಿರಾದಾರ ಇತರರಿದ್ದರು.

ಪ್ರಭುರಾವ ಬಿರಾದಾರ ಸ್ವಾಗತಿಸಿದರು. ಮಡಿವಾಳಪ್ಪ ಮಹಾಜನ ನಿರೂಪಣೆ ಮಾಡಿದರು. ಶಾಲಾ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…