ಶೈಕ್ಷಣಿಕ ಸಂಘಗಳ ಉದ್ಘಾಟನೆ

ಗಂಗೊಳ್ಳಿ: ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಹಾಗೂ ಶೈಕ್ಷಣಿಕ ಸಂಘಗಳ ಉದ್ಘಾಟನೆ ಗುರುವಾರ ನೆರವೇರಿತು.ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಶೇಖರ್ ವಿವಿಧ ಶೈಕ್ಷಣಿಕ ಸಂಘಗಳನ್ನು ಉದ್ಘಾಟಿಸಿ, ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಐವಿ ಪ್ರಮಾಣವಚನ ಬೋಧಿಸಿದರು. ದೈಹಿಕ ಶಿಕ್ಷಕ ಮೈಕಲ್ ಸಹಕರಿಸಿದರು. ಚಟುವಟಿಕಾ ಮಂತ್ರಿ ಲತೀಕಾ ಸ್ವಾಗತಿಸಿದರು. ವಿಪಕ್ಷ ನಾಯಕಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ನಾಯಕಿ ಶ್ರೀನಿಧಿ ವಂದಿಸಿದರು.