ಶಿಕ್ಷಣದಲ್ಲಿರಲಿ ಧರ್ಮ, ಸಂಸ್ಕೃತಿಯ ಪಾಠ

UDP-3-12-Bhandarakeri

ಪರ್ಯಾಯ ಪುತ್ತಿಗೆ ಶ್ರೀ ಆಶಯ | ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಿಗೆ ಭಾರತೀಯತೆಯ ಜ್ಞಾನ ಲಭಿಸುತ್ತಿಲ್ಲ. ಮಕ್ಕಳಿಗೆ ದೇಸೀಯ ಇತಿಹಾಸ, ಧಾರ್ಮಿಕ ಪ್ರಜ್ಞೆ ನೀಡುವ ಶಿಕ್ಷಣ ಲಭಿಸುತ್ತಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳ ಪರಿಚಯ ಮಾಡಿಸುವಂತಹ ಪಾಠಗಳು ಇರಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರ 45ನೇ ಚಾತುರ್ಮಾಸ್ಯ ಮಹೋತ್ಸವದ ನಿಮಿತ್ತ ರಥಬೀದಿಯ ಭಂಡಾರಕೇರಿ ಮಠದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾಗವತ ಪ್ರೋಷ್ಠಪದಿ ಪ್ರವಚನ ಉದ್ಘಾಟಿಸಿ ಮಾತನಾಡಿದರು.

ಸಂಸಾರದ ಮೋಹ

ಬ್ರಾಹ್ಮಣ, ತೌಳವ ಸಮಾಜ ಸಂಸಾರದ ಮೋಹಕ್ಕೆ ಮರುಳಾಗುತ್ತಿದ್ದಾರೆ. ಅದರಿಂದ ಜನಸಂಖ್ಯೆಯೂ ಕ್ಷೀಣಿಸುತ್ತಲಿದೆ. ನಮ್ಮ ಸಂಸ್ಕೃತಿಯ ರಕ್ಷಣೆಗೆ ಈಗಲೇ ಚಿಂತನೆ, ಕಾರ್ಯಯೋಜನೆ ಮಾಡಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಗಂಡಾಂತರ ಎದುರಾಗಲಿದೆ. ಸನ್ಯಾಸಿಗಳು ಕೇವಲ ಜಪ, ಪೂಜೆ, ಭಿಕ್ಷೆಗೆ ಸೀಮಿತವಾಗದೆ ಸಮಾಜದ ಉದ್ಧಾರಕ್ಕೂ ಶ್ರಮಿಸಬೇಕು ಎಂದರು.

ಎಲ್ಲಡೆ ರಕ್ತಪಾತ

ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸಂವಿಧಾನದತ್ತ ಗೋರಕ್ಷಣೆಯ ಕೆಲಸ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ. ಹೀಗಾಗಿ ಎಲ್ಲಡೆ ರಕ್ತಪಾತವಾಗುತ್ತಿದೆ. ಭಗವದ್ಗೀತೆಯೆಂಬ ಕ್ಷೀರ, ಭಾಗವತವೆಂಬ ಹಣ್ಣು ಸೇವಿಸಿ ಆತ್ಮ ದಷ್ಟ-ಪುಷ್ಟವಾಗಬೇಕು. ಭಗವಂತ ಹೃದಯ ಭಕ್ತಿಗೆ ಮಾತ್ರ ಒಲಿಯುತ್ತಾನೆ. ಆಡಂಬರದ ಭಕ್ತಿ ಅವನಿಗೆ ಬೇಕಾಗಿಲ್ಲ ಎಂದರು.

ಉಡುಪಿ ಶಾಸಕ ಯಶಪಾಲ್​ ಸುವರ್ಣ, ಕರ್ಣಾಟಕ ಬ್ಯಾಂಕ್​ನ ಡಿಜಿಎಂ ರಾಜಗೋಪಾಲ ಭಟ್​ ಮಾತನಾಡಿದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ನ ಅಧ್ಯಕ್ಷ ಕೆ. ಚಂದ್ರಕಾಂತ್​ ಉಪಸ್ಥಿತರಿದ್ದರು.

ಅಮೃತಾ ಶೀರೂರು ಪ್ರಾರ್ಥಿಸಿದರು. ನಾಗೇಂದ್ರ ಆಚಾರ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರಂಪಳ್ಳಿ ವಾಸುದೇವ ಭಟ್​ ನಿರೂಪಿಸಿದರು. ವಿಷ್ಣುಪ್ರಸಾದ್​ ಪಾಡಿಗಾರು ವಂದಿಸಿದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ