ಕಾಸರಗೋಡು: ಚೆರ್ಕಳ–ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಪೆರ್ಲ ಪೇಟೆಯ ಚೆಕ್‌ಪೋಸ್ಟ್ ವಠಾರದಲ್ಲಿ ಅಂತಾರಾಜ್ಯ ಹೆದ್ದಾರಿಗೆ ಹೊಂದಿಕೊಂಡು ತಲೆಯೆತ್ತಿರುವ ‘ಶ್ರೀಮಾತಾ ಆರ್ಕೇಡ್’ ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಜ.20ರಂದು ಬೆಳಗ್ಗೆ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನೂತನ ಕಟ್ಟಡ ಲೋಕಾರ್ಪಣೆಗೈದು, ಮಂತ್ರಾಕ್ಷತೆ ನೀಡುವರು. ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ ಅತಿಥಿಯಾಗಿರುವರು. ಸುಸಜ್ಜಿತ ಹಾಗೂ ಬಹುಅಂತಸ್ತಿನ ಶ್ರೀಮಾತಾ ಆರ್ಕೇಡ್‌ನಲ್ಲಿ ಶುದ್ಧ ಸಸ್ಯಾಹಾರಿ ಹೋಟೆಲ್ ಆರಂಭಗೊಳ್ಳಲಿದೆ. ಬಟ್ಟೆ ಅಂಗಡಿ, ವೈದ್ಯರ ಕ್ಲಿನಿಕ್, ವಿವಿಧ ಕಚೇರಿ, ಡಿಜಿಟಲ್ ಪ್ರಿಂಟಿಂಗ್–ಪ್ಲೆಕ್ಸ್ ಬೋರ್ಡ್ ತಯಾರಿ ಸಂಸ್ಥೆ, ವಾಹನಗಳ ಬಿಡಿಭಾಗ ಮಾರಾಟ ಕೇಂದ್ರ ಸೇರಿದಂತೆ ವಿವಿಧ ವ್ಯಾಪಾರಿ ಮಳಿಗೆ ಕಾರ್ಯಾಚರಿಸಲಿದೆ. ಜತೆಗೆ ದೂರದೂರಿಂದ ಆಗಮಿಸುವವರ ಸೌಕರ್ಯಕ್ಕಾಗಿ ಸುಸಜ್ಜಿತ ಮಿನಿ ಸಭಾಂಗಣ ವ್ಯವಸ್ಥೆಯೊಂದಿಗೆ ವಸತಿಗೃಹವೂ ಕಾರ್ಯಾರಂಭಗೊಳ್ಳಲಿದೆ.
ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಇಳಿಕೆ : ವೈದ್ಯಾಧಿಕಾರಿಗೆ ಸಚಿವ ದಿನೇಶ್ ಗುಂಡೂರಾವ್ ತರಾಟೆ