ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಉದ್ಘಾಟನೆ

ಗೋಣಿಕೊಪ್ಪಲು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಉದ್ಘಾಟನೆಯನ್ನು ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣಗೌಡ ನೆರವೇರಿಸಿದರು.

ಈ ವೇಳೆ 350 ನೂತನ ಸದಸ್ಯರು ಸೇರ್ಪಡೆಗೊಂಡರು. ನೂತನ ಸದಸ್ಯರಿಗೆ ಹಸಿರು ಶಾಲು ಹೊದಿಸುವ ಮೂಲಕ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಹಾಗೂ ಪ್ರಮುಖರು ಬರಮಾಡಿಕೊಂಡರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಪ್ರಮಾಣವಚನ ಬೋಧಿಸಿದರು.

ಸಂಘ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣಗೌಡ ಮಾತನಾಡಿ, ರಾಜಕೀಯಕ್ಕಾಗಿ ರೈತರನ್ನು ಬಳಸಿಕೊಳ್ಳುವ ರಾಜಕಾರಣಿಗಳಿಗೆ ರೈತರೇ ಬುದ್ಧಿ ಕಲಿಸಬೇಕು. ಜಿಲ್ಲೆಯಲ್ಲಿ ರೈತ ಸಂಘದ ಬಲಪ್ರದರ್ಶನ ನಡೆಯಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಂಘವನ್ನು ಬಲಿಗೊಳಿಸುವ ಮೂಲಕ ಹೋರಾಟದ ರೂಪುರೇಷೆಗಳನ್ನು ಮುಂದಿನ ದಿನಗಳಲ್ಲಿ ಸಿದ್ಧಪಡಿಸಲಾಗುವುದು. ರೈತಪರ ಚಿಂತನೆಗಳನ್ನು ಮುಂದಿಟ್ಟುಕೊಂಡು ನಡೆಸುವ ಎಲ್ಲ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡಲಿದೆ. ಜಿಲ್ಲೆಯಲ್ಲಿ ಕೆಲವರು ರೈತ ಸಂಘದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡು ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ನಮ್ಮ ರೈತ ಪರ ನಿಲುವು ಉತ್ತರ ನೀಡಲಿದೆ ಎಂದರು.

ಸ್ಥಳೀಯ ರೈತ ಮುಖಂಡರಾದ ಬಾದುಮಂಡ ಮಹೇಶ್, ಮಾಣೀರ ದೇವಯ್ಯ, ಚಂಗುಲಂಡ ರಾಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಮಾತನಾಡಿದರು. ಕಾರ್ಯದರ್ಶಿ ಕಳ್ಳಿಚಂಡ ಧನು ಹಾಗೂ ವಿವಿಧ ರಾಜ್ಯಗಳಿಂದ ರೈತ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *