ಬೆಂಗಳೂರು: ಹಲವು ಒಳ್ಳೆಯ ವಿಚಾರಗಳಿಗೆ, ಸಾಧನೆಗಳಿಗೆ ಹೆಸರಾಗಿರುವ ಬೆಂಗಳೂರು ಮಹಾನಗರ, ಇದೊಂದು ವಿಷಯದಲ್ಲಿ ದೇಶದಲ್ಲಷ್ಟೇ ಅಲ್ಲ, ಜಗತ್ತಿನಲ್ಲೂ ಅತಿ ಕೆಟ್ಟ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇಂಥದ್ದೊಂದು ವಿಷಯನ್ನು ಸಮೀಕ್ಷೆಯೊಂದು ಹೊರಹಾಕಿದೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾಗಿದ್ದರೂ ಈ ಒಂದು ವಿಷಯದಲ್ಲಿ ಬೆಂಗಳೂರು ಕೆಟ್ಟ ಹೆಸರು ಪಡೆಯುವಂತಾಗಿದ್ದು ಅಚ್ಚರಿ ಹಾಗೂ ಬೇಸರದ ವಿಷಯ ಎಂದೇ ಹೇಳಲಾಗುತ್ತಿದೆ. ಕಳೆದ ವರ್ಷ ತಿಂಗಳುಗಟ್ಟಲೆ ಲಾಕ್ಡೌನ್ ಇದ್ದರೂ ಹೀಗೊಂದು ಕೆಟ್ಟ ಹೆಸರು ಬರುವಂಥ ಪರಿಸ್ಥಿತಿ ಬಂದಿದ್ದಂತೂ ತೀರಾ ಬೇಸರದ ಸಂಗತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೌದು.. ಬೆಂಗಳೂರನ್ನು ಹೀಗೆ ಕುಖ್ಯಾತಿಗೆ ಒಳಗಾಗುವಂತೆ ಮಾಡಿದ್ದು ಬೇರೇನೂ ಅಲ್ಲ, ಇಲ್ಲಿನ ಟ್ರಾಫಿಕ್. ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರು ಜಗತ್ತಿನ 6ನೇ ಹಾಗೂ ದೇಶದ 2ನೇ ಅತಿಕೆಟ್ಟ ನಗರ ಎಂಬುದಾಗಿ ಈ ಸಮೀಕ್ಷೆ ಹೇಳಿದೆ. 2020ರ ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್ ಈ ವಿಷಯವನ್ನು ಬಹಿರಂಗಗೊಳಿಸಿದೆ. ಇನ್ನು ಮುಂಬೈ ಜಗತ್ತಿನಲ್ಲೇ 2ನೇ ಕೆಟ್ಟ ನಗರ ಎನಿಸಿಕೊಂಡಿದ್ದು, ಮಾಸ್ಕೋ, ಬೊಗೊಟಾ, ಮನಿಲಾ ಹಾಗೂ ಇಸ್ತಾಂಬುಲ್ ನಂತರದ ಸ್ಥಾನಗಳಲ್ಲಿವೆ ಎಂಬುದನ್ನು ಈ ಸಮೀಕ್ಷೆ ತಿಳಿಸಿದೆ. ಹಾಗೆಯೇ ದೆಹಲಿ ಜಗತ್ತಿನಲ್ಲೇ 8ನೇ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಸುಧಾರಣೆ ಕಂಡುಬಂದಿದೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್-2020 ಬುಧವಾರ ಬಿಡುಗಡೆಯಾಗಿದ್ದು, ಅದರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಶೇ. 20 ತಗ್ಗಿದೆ. ಆದರೆ ಜಗತ್ತಿನ 416 ನಗರಗಳ ಪೈಕಿ ಬೆಂಗಳೂರು ಕೆಟ್ಟ ಪರಿಸ್ಥಿತಿಯಲ್ಲಿರುವುದು ಕಂಡುಬಂದಿದೆ. 2020ರ ಏಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಪ್ರಮಾಣ ತುಂಬ ಕಡಿಮೆ ಇದ್ದರೂ ಜನವರಿ-ಫೆಬ್ರವರಿಯಲ್ಲಿ ಹೆಚ್ಚಿನ ಸಂಚಾರದಟ್ಟಣೆ ಕಾಣಿಸಿತ್ತು ಎಂದು ಸಮೀಕ್ಷೆ ಹೇಳಿದೆ. (ಏಜೆನ್ಸೀಸ್)
ನಿವೃತ್ತ ಸೈನಿಕರ ಪುತ್ರಿಯನ್ನೇ ಅಪಹರಿಸಿ ಮತಾಂತರಿಸಿದನಾ ಕರ್ನಾಟಕದ ಈ ವ್ಯಕ್ತಿ?!