ಗ್ರಾಮಗಳ ಸ್ಥಳಾಂತರಕ್ಕೆ ಒತ್ತಾಯಿಸೋಣ

ಶಿರಗುಪ್ಪಿ: ಕಳೆದ ಬಾರಿ ಮಲ್ಲಿಕಾರ್ಜುನ ದೇವಸ್ಥಾನ ಸಭಾಭವನದಲ್ಲಿ ಜುಗೂಳ ಗ್ರಾಮ ಶಾಶ್ವತ ಸ್ಥಳಾಂತರ ಬಗ್ಗೆ ನಡೆದ ಪೂರ್ವಿಭಾವಿ ಸಭೆಯಲ್ಲಿ ನಿರ್ಣಯಿಸಿದಂತೆ ಎಲ್ಲ ಜನರ ಒಪ್ಪಿಗೆ ಮೇರೆಗೆ ಜುಗೂಳ ಗ್ರಾಪಂ ವ್ಯಾಪ್ತಿಯ ಜುಗೂಳ, ಮಂಗಾವತಿ ಹಾಗೂ ಶಾಹಾಪುರ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಸರ್ಕಾರಕ್ಕೆ ಒತ್ತಾಯಿಸೋಣ ಎಂದು ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ ಹೇಳಿದ್ದಾರೆ.

ಜುಗೂಳದಲ್ಲಿ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿ, ಗ್ರಾಪಂ ವ್ಯಾಪ್ತಿಯ ಮೂರು ಗ್ರಾಮಗಳ ಜನರು ಪ್ರತಿ ಬಾರಿ ಪ್ರವಾಹ ಭೀತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಪ್ರತಿ ವರ್ಷ ಸರ್ಕಾರಕ್ಕೆ ಬೆಳೆ ಹಾನಿ, ಮನೆ ಹಾನಿಯಂತಹ ಸಮಸ್ಯೆಗಳಿಂದ ಮುಕ್ತಿಗೆ ಗ್ರಾಮಗಳ ಶಾಶ್ವತ ಸ್ಥಳಾಂತರವೇ ದಾರಿಯಾಗಿದೆ. ಎಲ್ಲ ಜನರ ಅಭಿಪ್ರಾಯವೂ ಇದೆ ಆಗಿದೆ ಎಂದರು. ಡಿಕೆಎಸ್‌ಎಸ್‌ಕೆ ನಿರ್ದೇಶಕ ಅಣ್ಣಾಸಾಬ ಪಾಟೀಲ ಮಾತನಾಡಿ, ಪ್ರವಾಹ ಭೀತಿಯಿಂದ ಇಲ್ಲಿಯ ಜನ ನೊಂದು ಹೋಗಿದ್ದಾರೆ. ಎಲ್ಲರೂ ಈ ಬಾರಿ ಗ್ರಾಮದ ಶಾಶ್ವತ ಸ್ಥಳಾಂತರಕ್ಕೆ ಒತ್ತಾಯಿಸಿರುವುದರಿಂದ ಗ್ರಾಪಂ ಸದಸ್ಯರು ಸರ್ವಾನುಮತದಿಂದ ಗ್ರಾಮ ಸ್ಥಳಾಂತರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸೋಣ ಎಂದರು. ಪ್ರವಾಹ ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಕಾಗವಾಡ ಪಿಎಸ್‌ಐ ಹನುಮಂತ ಶಿರಹಟ್ಟಿ ಅವರನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ಅಥಣಿ ಎಪಿಎಂಸಿ ಅಧ್ಯಕ್ಷ ಅನೀಲ ಕಡೋಲೆ, ಬಾಬಾಸಾಬ ಪಾಟೀಲ, ಅನಿಲ ಸುಂಕೆ, ಸದಸ್ಯರಾದ ಸುಧಾಕರ ಗಣೇಶವಾಡಿ, ರವೀಂದ್ರ ವಾಂಟೆ ಇತರರು ಇದ್ದರು.

ಗೊಂದಲದ ಗೂಡಾದ ಗ್ರಾಮಸಭೆ

ಮನೆ ಸಮೀಕ್ಷೆಯಲ್ಲಿ ಲೋಪಗಳ ಬಗ್ಗೆ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಗ್ರಾಪಂ ಅಕಾರಿ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಮನೆ ಸಮೀಕ್ಷೆಯಲ್ಲಿ ಲೋಪಗಳಾಗಿವೆ ಎಂದು ಮುಖಂಡ ವಿಶ್ವನಾಥ ಶಮನೇವಾಡಿ ವಿವರಣೆ ನೀಡಿದ ಬಳಿಕ ಅಕಾರಿಗಳಿಂದ ಉತ್ತರ ಕೇಳಿದರು. ಈ ಸಂದರ್ಭ ಗ್ರಾಮಸ್ಥರು ಹಾಗೂ ಅಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಗೊಂದಲ ಸೃಷ್ಟಿಯಾಯಿತು.

Leave a Reply

Your email address will not be published. Required fields are marked *