ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ


ಕಟ್ಟೆಮಳಲವಾಡಿ: ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿದ್ದಾರೆ.
ಗ್ರಾಮದ ಕೃಷ್ಣಯ್ಯ(70) ಆತ್ಮಹತ್ಯೆ ಮಾಡಿಕೊಂಡವರು. ಹುಣಸೂರು ಪಟ್ಟಣದ ಐ.ಒ.ಬಿ ಬ್ಯಾಂಕ್‌ನಲ್ಲಿ 93 ಸಾವಿರ ರೂ. ಬೆಳೆ ಸಾಲ ಮಾಡಿದ್ದು, ಪತ್ನಿ ಖಾಸಗಿ ಸಂಸ್ಥೆ ಮತ್ತು ಮಹಿಳಾ ಸಂಘಗಳಲ್ಲಿ 90 ಸಾವಿರ ರೂ. ಸಾಲ ಮಾಡಿದ್ದರು. ಈ ಬಾರಿ ವಿಪರೀತ ಮಳೆ ಬಿದ್ದು ತಂಬಾಕು ಹಾಗೂ ಇನ್ನಿತರ ಬೆಳೆಗಳು ಕೈ ಸೇರದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *