17.8 C
Bengaluru
Wednesday, January 22, 2020

ಬೆಳಗಾವಿ: ಉದ್ಯಾನಗಳಲ್ಲಿ ಪ್ರೇಮ ಸಲ್ಲಾಪ

Latest News

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು....

|ಜಗದೀಶ ಹೊಂಬಳಿ ಬೆಳಗಾವಿ

‘ಏಳಿ… ಎದ್ದೇಳಿ. ಗುರಿ ಮುಟ್ಟುವವರೆಗೆ ನಿಲ್ಲದಿರಿ. ಈ ಅಲ್ಪ ಜೀವನವನ್ನು ದೇಶಕ್ಕಾಗಿ ಬಲಿದಾನ ಮಾಡೋಣ…’ ಎಂದು ಸ್ವಾಮಿ ವಿವೇಕಾನಂದರು ದೇಶದ ಯುವ ಸಮುದಾಯಕ್ಕೆ ಜಾಗೃತಿಯ ಕರೆಯಿತ್ತಿದ್ದರು. ಆದರೆ, ಇಂದಿನ ಯುವ ಸಮುದಾಯದ ಬಹುತೇಕರ ವರ್ತನೆ ನೋಡಿದರೆ ಅಸಹ್ಯಪಡುವಂತಾಗುತ್ತಿದೆ.

ಶಾಲಾ- ಕಾಲೇಜಿಗೆ ತೆರಳಿ ಜ್ಞಾನಾರ್ಜನೆ ಮಾಡಬೇಕಾದ ದಿನಗಳಲ್ಲಿ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯತೊಡಗಿದ್ದಾರೆ. ಕೆಲ ವಿದ್ಯಾರ್ಥಿನಿಯರೂ ಶಾಲಾ ಸಮಯದಲ್ಲಿ ಉದ್ಯಾನಗಳಿಗೆ ಆಗಮಿಸಿ ಪ್ರೇಮ ಸಲ್ಲಾಪದಲ್ಲಿ ತೊಡಗುತ್ತಿದ್ದಾರೆ. ಉದ್ಯಾನಗಳಿಗೆ ಕುಟುಂಬ ಸಮೇತ ಆಗಮಿಸುವ ಸಭ್ಯರಿಗೆ ಇಂತಹ ಯುವಕ- ಯುವತಿಯರ ಅಸಭ್ಯ ವರ್ತನೆಯಿಂದ ಮುಜುಗರಕ್ಕೊಳಗಾಗುತ್ತಿದ್ದಾರೆ.

ಕ್ಲಾಸಿಗೆ ಚಕ್ಕರ್: ಶಾಲೆಗೆ ಹೋಗಿ ವಿದ್ಯಾಭ್ಯಾಸದಲ್ಲಿ ತೊಡಗಬೇಕಿದ್ದ ಹೈಸ್ಕೂಲ್ ವಿದ್ಯಾರ್ಥಿಗಳೂ ಸಹ ಕ್ಲಾಸಿಗೆ ಚಕ್ಕರ್ ಹೊಡೆದು ಉದ್ಯಾನ (ಪಾರ್ಕ್)ಕ್ಕೆ ಬರತೊಡಗಿದ್ದಾರೆ. ಯಾರ ಭಯವೂ ಇಲ್ಲದೆ ಶಾಲೆಯ ಸಮವಸ ದಲ್ಲಿಯೇ ಬರುತ್ತಾರೆ. ಸ್ಥಳೀಯರಿಗೆ ತಾವ್ಯಾರೆಂದು ತಿಳಿಯಬಾರದೆಂದು ಕೆಲ ವಿದ್ಯಾರ್ಥಿನಿಯರು ಮುಖಕ್ಕೆ ಚೂಡಿದಾರದ ವೇಲು ಸುತ್ತಿಕೊಂಡು ಹೈಸ್ಕೂಲ್ ವಿದ್ಯಾರ್ಥಿಯೊಂದಿಗೆ ಪಾರ್ಕ್‌ನಲ್ಲಿ ಪ್ರೇಮ ಸಲ್ಲಾಪ ಮಾಡತೊಡಗಿದ್ದಾರೆ.

ಪ್ರಾಥಮಿಕ-ಪ್ರೌಢಶಾಲೆಗೆ ಹೋಗುವ ಮಕ್ಕಳ ಕೈಯಲ್ಲೂ ಇಂದು ಮೊಬೈಲ್ ನಲಿದಾಡತೊಡಗಿದೆ. ಚಿಕ್ಕ ಮಕ್ಕಳೂ ಸಹ ಇಂದು ಗೂಗಲ್‌ನಲ್ಲಿ ‘ಏನೇನನ್ನೋ’ ಸರ್ಚ್ ಮಾಡುತ್ತಾರೆ. ನೋಡಬಾರದ್ದನ್ನೆಲ್ಲ ಸುಲಭವಾಗಿ ನೋಡಿ, ಅದರಂತೆಯೇ ಮಾಡಲು ಹಾತೊರೆಯತೊಡಗಿದ್ದಾರೆ. ಉದ್ಯಾನಗಳಿಗೆ ಆಗಮಿಸಿ ‘ಅಶ್ಲೀಲ ಕೆಲಸ’ವನ್ನೂ ಮಾಡತೊಡಗಿದ್ದಾರೆ.

ಕ್ಷಣಿಕ ಸುಖಕ್ಕಾಗಿ ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣ ನಿತ್ಯವೂ ಸಮಾಜದಲ್ಲಿ ನಡೆಯುತ್ತಿರುವುದನ್ನು ನೋಡುತ್ತಲೂ ಇದ್ದೇವೆ. ಹೆಣ್ಣು ಮಕ್ಕಳನ್ನು ವಂಚಿಸಿ, ಅವರ ಜೀವನ ಹಾಳುಗೆಡವುತ್ತಿರುವ ಕೆಲ ಯುವಕರ ವರ್ತನೆ ನಿಜಕ್ಕೂ ದಿಗಿಲು ಬಡಿಯುತ್ತಿದೆ.

ಪಾಲಕರೇ ಮಕ್ಕಳ ಬಗ್ಗೆ ನಿಗಾ ವಹಿಸಿ

ಕ್ಲಾಸ್‌ಗೆ ಚಕ್ಕರ್ ಹೊಡೆದು ಪಾರ್ಕ್‌ಗೆ ದಾಂಗುಡಿ ಇಡುವ ಮಕ್ಕಳ ಸಂಖ್ಯೆ ಏರತೊಡಗಿದೆ. ಶಾಲಾ-ಕಾಲೇಜಿನಲ್ಲಿ ಎಕ್ಸ್‌ಟ್ರಾ ಕ್ಲಾಸ್ ಇದೆ ಎಂದು ಪಾಲಕರಿಗೆ ಸುಳ್ಳು ಹೇಳಿ ದಿನಪೂರ್ತಿ ಉದ್ಯಾನದಲ್ಲೇ ಕೆಲ ವಿದ್ಯಾರ್ಥಿಗಳು ಕಾಲಕಳೆಯುತ್ತಾರೆ. ದಿನವೂ ಲೇಟಾಗಿ ಮನೆಗೆ ಬಂದು ಸುಳ್ಳಿನ ಕಂತೆಯನ್ನೇ ಬಿಚ್ಚಿಡುತ್ತಾರೆ. ಹೀಗಾಗಿ ಇಂತಹ ಮಕ್ಕಳ ಬಗ್ಗೆ ಪಾಲಕರು ತುಸು ಕಾಳಜಿ ವಹಿಸುವುದು ಒಳಿತು. ತಮ್ಮ ಮಕ್ಕಳು ಚೆನ್ನಾಗಿ ಕಲಿಯಲಿ ಎಂದು ಸಾವಿರ-ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ಶಾಲೆಗೆ ಕಳುಹಿಸಿರುತ್ತಾರೆ. ಆದರೆ, ಕೆಲ ಮಕ್ಕಳು ಹೆತ್ತವರಿಗೆ ವಂಚಿಸಿ, ಮೋಜು-ಮಸ್ತಿ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಮಕ್ಕಳ ‘ದಿನಚರಿ’ಯತ್ತ ಪಾಲಕರು ಲಕ್ಷ್ಯ ವಹಿಸಬೇಕಿದೆ.

ಪ್ರೀತಿ ಮಾಡುವುದು ತಪ್ಪಲ್ಲ. ಅದಕ್ಕೂ ಒಂದು ವಯಸ್ಸು ಇರುತ್ತದೆ. ನಿಜವಾಗಿ ಪ್ರೀತಿಸಿ ಮದುವೆಯಾಗುವವರು ಯಾರೂ ಈ ರೀತಿ ಪಾರ್ಕ್‌ನಲ್ಲಿ ಕಾಲ ಕಳೆಯುವುದಿಲ್ಲ. ಇಂತಹ ಕೆಟ್ಟ ಮಕ್ಕಳಿಂದಾಗಿ ಕುಟುಂಬಗಳೊಂದಿಗೆ ಉದ್ಯಾನಕ್ಕೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಉದ್ಯಾನಗಳಲ್ಲಿ ಮೋಜು-ಮಸ್ತಿ ಮಾಡುವ ಅವರಿಗೆ ಯಾರ ಭಯವೂ ಇಲ್ಲ. ಇದು
ಇಂದಿನ ಯುವ ಸಮೂಹದ ದುರ್ಬಲತೆ. ಉದ್ಯಾನಗಳಲ್ಲಿ ಈರೀತಿ ಅಸಭ್ಯ ವರ್ತನೆ ನಡೆಯದಂತೆ ಸಂಬಂಧಿತರು ಹಾಗೂ ಇದನ್ನು ನೋಡಿಯೂ ಸುಮ್ಮನೆ ಇರುವ ಪೊಲೀಸ್ ಇಲಾಖೆಯೂ ಜವಾಬ್ದಾರಿ ನಿಭಾಯಿಸಬೇಕಿದೆ.
ದೌವಲತ್ ಸಾಖರಾಣಿ ಕುಟುಂಬದೊಂದಿಗೆ ಬೆಳಗಾವಿ ಉದ್ಯಾನವೊಂದಕ್ಕೆ ಬಂದಿದ್ದ ಸೊಲ್ಲಾಪುರದ ನಿವಾಸಿ

ಶಾಲೆಗೆ ಹೋಗುವ ಈ ಮಕ್ಕಳ ‘ಕಳ್ಳಾಟ’ದಿಂದ ಹಾಗೂ ಅವರ ಯಡವಟ್ಟಿನಿಂದ ವಿನಾಕಾರಣ ಪಾಲಕರು ಮರ್ಯಾದೆ ಕಳೆದುಕೊಳ್ಳುವಂತಾಗುತ್ತಿದೆ. ಜೀವನಪೂರ್ತಿ ಅವರು ಕೊರಗುವಂತಾಗಿದೆ. ಇಂದಿನ ಅನೇಕ ಹುಡುಗ-ಹುಡುಗಿಯರು ಕೆಟ್ಟು ಹೋಗಿದ್ದಾರೆ. ಶಾಲಾ-ಕಾಲೇಜಿಗೆ ಹೋಗಬೇಕಾದವರು ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಉದ್ಯಾನದಲ್ಲಿ ಈ ರೀತಿ ಬಹಿರಂಗವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ. ಮದುವೆ ಮಾಡಿಕೊಟ್ಟ ಬಳಿಕವೂ ಅನೇಕ ಹುಡುಗಿಯರು ಹಳೇ ಪ್ರೇಮಿಯೊಂದಿಗೆ ಓಡಿಹೋದ ಸುದ್ದಿಯನ್ನು ನಾವು ಟಿವಿ, ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಪಾಲಕರು ಜಾಗೃತರಾಗಬೇಕಿದೆ.
ಲಕ್ಷ್ಮಣ ಅಪ್ಪಾಜಿ ಕುರಿಯಳಕರ ಮಹಾಬಲೇಶ್ವರ ನಗರದ ಹಿರಿಯ ನಿವಾಸಿ, ಬೆಳಗಾವಿ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...