ಬೆಳಗಾವಿ: ಅಸಮತೋಲನ ಸಮಸ್ಯೆ(ನಡೆದಾಡುವ ತೊಂದರೆ) ಹೊಂದಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕೆಎಲ್‌ಇ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಹೇಳಿದರು.
ನಗರದ ಕಾಹೆರ್, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕಿವಿ, ಮೂಗು, ಗಂಟಲು ವಿಭಾಗವು ಬುಧವಾರ ಹಮ್ಮಿಕೊಂಡಿದ್ದ ‘ಅಸಮತೋಲನ ಅರಿವು ಮತ್ತು ಮುಂದುವರಿದ ವೈದ್ಯಕೀಯ ಶಿಕ್ಷಣ’ ವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ 60 ವರ್ಷ ವಯಸ್ಸಿನ ನಂತರ ಅಸಮತೋಲನ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಈ ಸಮಸ್ಯೆ ಹೋಗಲಾಡಿಸಲು ವೈದ್ಯರು ಸರಿಯಾದ ಚಿಕಿತ್ಸೆ ನೀಡುವುದರೊಂದಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಜೀವನಶೈಲಿ ಬದಲಾವಣೆ, ವ್ಯಾಯಾಮದಿಂದ ತೊಂದರೆ ನಿವಾರಿಸಬಹುದು ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ.ದಯಾನಂದ, ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ.ಶ್ರೀನಿವಾಸ ಬಿ.ಆರ್., ಡಾ.ಎಂ.ಎ. ಜಾಲಿ, ಡಾ.ರಾಜೇಶ ಪವಾರ, ಡಾ.ಎಚ್.ಬಿ. ರಾಜಶೇಖರ, ಡಾ.ಆರಿಫ್ ಮಾಲ್ದಾರ, ಡಾ.ವಿನಿತಾ ಮೆಟಗುಡ್ಡಮಠ, ಇಎನ್‌ಟಿ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಮೆಟಗುಡ್ಡಮಠ, ಡಾ.ಅನಿಲ ಹಾರುಗೊಪ್ಪ, ಡಾ.ಪ್ರೀತಿ ಹಜಾರೆ, ಡಾ.ನಿತಿನ ಅಂಕಲೆ, ಡಾ.ಪ್ರೀತಿ ಶೆಟ್ಟಿ, ಡಾ.ರಾಜೇಶ ಹವಾಲ್ದಾರ, ಡಾ.ವಿಶ್ವನಾಥ ಗೌಡ, ಡಾ.ಪ್ರಿಯಾಂಕಾ ಸಿಂಗ್, ಡಾ.ತನುಭಾ ಗೋಯಲ್, ಡಾ.ಶಿಲ್ಪಾ ಮಲ್ಲಾಪುರ, ಡಾ.ರಾಹುಲ್ ಗುಲಗಂಜಿ, ಡಾ.ಸುಪ್ರಿತಾ ಸವದತ್ತಿ, ಡಾ.ಪ್ರಶಾಂತ ಪಾಟೀಲ ಇತರರಿದ್ದರು.