ಬೆಳಗಾವಿ: ಮಾರಾಮಾರಿಯಲ್ಲಿ ಇಬ್ಬರಿಗೆ ತೀವ್ರ ಗಾಯ

ಬೆಳಗಾವಿ: ನಗರದ ಹೊರ ವಲಯದಲ್ಲಿ ಹೋಟೆಲ್ ಇರಿಸಿಕೊಂಡಿದ್ದ ಮೂವರು ಸಹೋದರರು ಮಂಗಳವಾರ ತಡರಾತ್ರಿ ಮಾರಾಮಾರಿ ನಡೆಸಿದ್ದು, ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಿರಿಯೂರಿನ ನಿವಾಸಿಗಳಾದ ನಾಗರಾಜ, ಚಿಕ್ಕಯ್ಯ ಗಾಯಗೊಂಡವರು. ಇವರ ಸಹೋದರ ಮಂಜು ಜತೆಗೂಡಿ ಅವರು ನಗರದ ಹೊರ ವಲಯದಲ್ಲಿ ಹೋಟೆಲ್ ನಡೆಸುತ್ತಿದ್ದರು. ಕೆಲಸಕ್ಕೆ ಸಂಬಂಧಿಸಿ ವಾಗ್ವಾದ ನಡೆಸಿ ಹೊಡೆದಾಡಿಕೊಂಡು ಗಾಯಗೊಂಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ದೂರು ದಾಖಲಾಗಿದೆ.