More

    ಒಲಿಂಪಿಕ್ಸ್​ ಸಾಧಕರು: ಒಬ್ಬೊಬ್ಬರು ಎದುರಿಸಿದ ಸವಾಲುಗಳನ್ನು ಕೇಳಿದ್ರೆ ಮೈನವಿರೇಳುತ್ತೆ..!

    ಸಾಧನೆಗೆ ಯಾವುದೂ ಅಡ್ಡಿಯಾಗದಲ್ಲ ಅನ್ನೋದಕ್ಕೆ, ಈ ಒಲಿಂಪಿಕ್ಸ್​ನಲ್ಲಿ ಸಾಧಿಸಿದವ್ರೇ ಸಾಕ್ಷಿ. ಇಲ್ಲಿ ಚಿನ್ನದ ಸ್ಪೂನ್​ ಇಟ್ಕೊಂಡು ಬಂದವ್ರು ಯಾರಿಲ್ಲ. ಪ್ರತಿಯೊಬ್ಬರೂ ಕೂಡ ಬಡತನದ ನಡುವೆ ಬೆವರು ಸುರಿಸಿ, ಅದೇ ಬೆವರನ್ನ ಪದಕವಾಗಿ ಬದಲಿಸಿದ ಸಾಧಕರು. ಅದು ಮೊದಲ ಬೆಳ್ಳಿಯಿಂದ ಹಿಡಿದು ಕೊನೆಯ ಬಂಗಾರದವರೆಗೂ ಮುಂದುವರೆದಿದ್ದು, ಒಬ್ಬೊಬ್ಬರು ಎದುರಿಸಿದ ಸವಾಲು ನೋಡಿದ್ರೆ ರೋಮ ರೋಮಗಳು ಪುಟಿದು ನಿಲ್ತವೇ.. ಕಷ್ಟ ಅನ್ನೋದು ಕರಗಿ ಆನಂದದ.. ಹೆಮ್ಮೆಯ ಕಣ್ಣೀರಾಗುತ್ತವೇ..

    ನೀರಜ್ ಕಷ್ಟದಿಂದ ಬಂದು ಇಂದು ಚಿನ್ನ ಪದಕಕ್ಕೆ ಕೊರಳೊಡ್ಡಿದ್ರೋ ಹಾಗೇಯೇ, ಇದೇ ಒಲಿಂಪಿಕ್ಸ್​ನಲ್ಲಿ ಪದಕ ಪಡೆದ ಒಬ್ಬೊಬ್ಬರು ಕೂಡ ಕಡು ಕಷ್ಟದಿಂದ ಬಂದು ಸಾಧನೆ ಮಾಡಿದ್ದಾರೆ. ಒಬ್ಬೊಬ್ಬರ ಸಾಧನೆ ಹಿಂದಿನ ಸವಾಲು ಕೇಳಿದ್ರೆ ನಿಮಗೆ ರೋಮಾಂಚನ ಆಗುತ್ತೆ..

    ಇದನ್ನೂ ಓದಿರಿ: ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!

    ಕಷ್ಟಗಳನ್ನ ಮೆಟ್ಟಿನಿಂತ ಈಕೆ ವೇಟ್​​ಲಿಫ್ಟಿಂಗ್​ನ ಮಹಾರಾಣಿ!
    ಚಾನು ಸಾಯಿಕೋಮ್ ಮೀರಾಬಾಯಿ… ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕದ ಖಾತೆ ತೆರೆದಿದ್ದು ಈಕೆಯೇ. ಬಟ್ ಅದಕ್ಕಾಗಿ ಈಕೆ ಪಟ್ಟ ಪಾಡು ಇದ್ಯಲ್ಲ ಅದು ಅಷ್ಟಿಷ್ಟಲ್ಲ. 49 ಕೆಜಿ ವಿಭಾಗದ ವೇಟ್​ಲಿಫ್ಟಿಂಗ್​​ನಲ್ಲಿ ಬೆಳ್ಳಿಪದಕ ತಮ್ಮದಾಗಿಸಿಕೊಂಡ ಈಕೆ ಕಡು ಕುಟುಂಬದಿಂದ ಬಂದ ಸಾಧಕಿ. ಚಾನು ಹುಟ್ಟಿದ್ದು ಮಣಿಪುರದ ನಾಂಗ್ ಪೋಕ್ ಕಾಕ್ಚಿಂಗ್ ಅನ್ನೋ ಪುಟ್ಟ ಗ್ರಾಮದ ಬಡಕುಟುಂಬದಲ್ಲಿ. 6 ಮಂದಿ ಸೋದರ-ಸೋದರಿಯರ ಬಡಕುಟುಂಬದಲ್ಲಿ. ಎಷ್ಟು ಬಡತನ ಎಂದ್ರೆ ಮನೆಮಕ್ಕಳಿಗೆ ವಾರದಲ್ಲಿ ಹಾಲು ಕುಡಿಯೋಕೆ ಸಾಧ್ಯವಾಗ್ತಿದ್ದೇ ಎರಡು ಸಲ.

    ಅಂತದ್ರಲ್ಲಿ ಹಾಗೂ-ಹೀಗೂ ಹರಸಾಹಸ ಪಟ್ಟು, ಅಣ್ಣನ ಜೊತೆ ಕಟ್ಟಿಗೆ ಹೊತ್ತು, ಇಲ್ಲಿವರೆಗೆ ಬಂದಿದ್ದಾಳೆ. ಎಲ್ಲಿಯವರೆಗೆ ಅಂದ್ರೆ ಈಕೆಗೆ 2016ರ ಒಲಿಂಪಿಕ್ಸ್​ಗೆ ಹೋಗುವಾಗ ತಾಯಿಯೊಂದು ಕಿವಿಯೋಲೆ ಮಾಡಿಕೊಟ್ಟಿದ್ರಂತೆ. ಅದು ಕೂಡ ತಾಯಿ ಬಳಿಯಿದ್ದ ಆಭರಣಗಳೆನ್ನೆಲ್ಲಾ ಕರಗಿಸಿ. ಅಂತಹ ಕಡುಬಡತನದಿಂದ ಬದುಕು ಸಾಗಿಸಿದವ್ರು ಮೀರಾಬಾಯಿ. ಅಂದು ಏನೂ ಇಲ್ಲದ ಕುಟುಂಬದ ಈ ಕುಡಿ ಬಗ್ಗೆ ಇಂದು ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ.

    ಕಡುಕಷ್ಟದಲ್ಲಿ ಬೆಳೆದು ಬಂದವರು ನಮ್ಮ ಹಾಕಿ ಆಟಗಾರರು!
    ಭಾರತ ಹಾಕಿ ಟೀಂ ಬಗ್ಗೆ ಇಡೀ ವಿಶ್ವವೇ ಹೆಮ್ಮೆ ಪಡುತ್ತೆ. ಆದ್ರೆ ಅದ್ರಲ್ಲಿರೋ ಒಬ್ಬೊಬ್ಬ ಆಟಗಾರನೂ ಕೂಡ ಕಷ್ಟದಲ್ಲಿ ಅರಳಿದ ಹೂಗಳೇ.. ಅದಕ್ಕೆ ಸಾಕ್ಷಿ ಗೋಲ್ ಕೀಪರ್ ಶ್ರೀಜೇಶ್. ಈ ಬಾರಿ ಕಂಚಿಗೆ ಮುತ್ತಿಕ್ಕಿತ್ತುವಂತೆ ಮಾಡುವಲ್ಲಿ ಗೋಲ್​ಕೀಪರ್ ಪಾತ್ರ ಮಹತ್ವದ್ದು. ಇದ್ರಲ್ಲಿ ಶ್ರೀಜೇಶ್ ಹುಟ್ಟಿದ್ದು, ಕೇರಳದ ಸಾಧಾರಣ ಕೃಷಿ ಅವಲಂಬಿತ ಕುಟುಂಬದಲ್ಲಿ. ಶ್ರೀಜೇಶ್ ಹಾಕಿ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸಿದ್ದು ಅವರ ತಂದೆ. ಅದಕ್ಕೆ ಅವ್ರು ಕಿಟ್​ಗಾಗಿ ತೆಗೆದುಕೊಂಡ ತೀರ್ಮಾನವೇ ಸಾಕ್ಷಿ. ಹಾಕಿ ಕಿಟ್ ಖರೀದಲು ಶ್ರೀಜೇಶ್ ತಂದೆ ರವೀಂದ್ರನ್ ಬಳಿ ಸಾಕಷ್ಟು ಹಣವಿರಲಿಲ್ಲ, ಆಗ ಅವ್ರು ಒಂದು ಹಾಕಿ ಕಿಟ್‌ಗೆ 10 ಸಾವಿರ ರೂ. ಹೊಂದಿಸಲು ಸಾಧ್ಯವಾಗದೆ. ಅವ್ರ ಬಳಿಯಿದ್ದ 5 ಹಸುಗಳಲ್ಲಿ ಒಂದನ್ನು 7 ಸಾವಿರ ರೂ.ಗೆ ಮಾರಾಟ ಮಾಡ್ತಾರೆ. ಇನ್ನುಳಿದ ಹಣವನ್ನು ಹೊಂದಿಸಿ ಹಾಕಿ ಕಿಟ್ ಖರೀದಿಸಿ ಪುತ್ರನಿಗೆ ಕೊಡ್ತಾರೆ. ಅಂತಹ ಕಷ್ಟದಲ್ಲಿ ಬಂದವ್ರು ಇವ್ರು.

    ಮಹಿಳಾ ಹಾಕಿ ತಂಡದ ನಾಯಕಿಯದ್ದೂ ಕಷ್ಟದ ಬಂಡಿ!
    ರಾಣಿ ರಾಂಪಾಲ್ ಭಾರತ ಮಹಿಳಾ ಹಾಕಿ ತಂಡದ ನಾಯಕಿ. ಈ ಬಾರಿ ನಮ್ಮ ಮಹಿಳಾ ಹಾಕಿ ತಂಡ ಇಷ್ಟು ಒಳ್ಳೇ ಪ್ರದರ್ಶನ ಕೊಡಲು ಈಕೆಯೇ ಪ್ರಮುಖ. ಈ ತಂಡವನ್ನ ಮುನ್ನಡೆಸಿದ್ದು ಇದೇ ರಾಣಿ ರಾಂಪಾಲ್. ಆದ್ರೆ ರಾಣಿ ಹುಟ್ಟಿದ್ದು ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಮಾರ್ಕಂಡದ ಕಡು ಬಡತನದ ಕುಟುಂಬದಲ್ಲಿ ಅಂದ್ರೆ ನೀವು ನಂಬಲೇ ಬೇಕು. ಅದೆಷ್ಟು ಬಡತನ ಅಂದ್ರೆ ರಾಣಿಗೆ ಹಾಕಿ ಸ್ಟಿಕ್ ತೆಗೆದುಕೊಳ್ಳೋದಕ್ಕೂ ಹಣ ಇರ್ತಿರ್ಲಿಲ್ಲ. ರಾಣಿ ತಂದೆ ಕುದುರೆ ಬಂಡಿ ಎಳೆಯೋ ಕೆಲ್ಸ ಮಾಡ್ತಿದ್ರು. ತಮ್ಗೆ ಹೊಟ್ಟೆ ಬಟ್ಟೆಗೆ ಇಲ್ದೇ ಇದ್ರೂ ಪರ್ವಾಗಿಲ್ಲ ನನ್ನ ಮಗಳು ಸಾಧನೆ ಮಾಡ್ಬೇಕು ಅಂತ ಕಷ್ಟಪಟ್ಟು ದುಡಿದು ಮಗಳನನ್ನ ಸಾಧಕಿಯನ್ನಾಗಿ ಮಾಡಿದ್ದಾರೆ. ಈಗ ತಂದೆಯ ಜೊತೆ ದೇಶದ ಕೀರ್ತಿಯನ್ನೂ ಈಕೆ ಎತ್ತಿ ಹಿಡಿದಿದ್ದಾಳೆ ನೋಡಿ.

    ‘ರಜತ’ ಕುಮಾರ ನಡೆದಿದ್ದು ಮುಳ್ಳಿನ ಹಾದಿಯಲ್ಲಿ!
    ಈ ಬಾರಿಯ ಒಲಿಂಪಿಕ್ಸ್ ಕಣದಲ್ಲಿ ಬೆಳ್ಳಿ ಗೆದ್ದ ಎರಡನೇ ಭಾರತೀಯ ಕುಸ್ತಿಪಟು ಅನ್ನೋ ಹೆಗ್ಗಳಿಕೆಗೆ ರವಿ ಕುಮಾರ್ ದಹಿಯಾದ್ದು. ಒಲಿಂಪಿಕ್ಸ್​ ಬೆಳ್ಳಿ ಗೆದ್ದ ಈ ರಜತ ಕುಮಾರ ನಡೆದಿದ್ದು ಮುಳ್ಳಿನ ದಾರಿಯಲ್ಲಿ. ಹುಟ್ಟಿದ್ದು ಹರ್ಯಾಣ ಸೋನಿಪತ್ ಜಿಲ್ಲೆಯ ನಹ್ರಿ ಅನ್ನೋ ಪುಟ್ಟ ಗ್ರಾಮದಲ್ಲಿ. ಮನೆಯಲ್ಲಿ ಬಡತನ. ಸ್ವಂತ ಜಮೀನು ಅನ್ನೋದು ಇರ್ಲಿಲ್ಲ. ರವಿಕುಮಾರ್ ತಂದೆ ಬೇರೆಯವರ ಜಮೀನಿನಲ್ಲಿ ಕೆಲ್ಸ ಮಾಡ್ತಿದ್ರು. ಆದ್ರೂ ಮಗನನ್ನ ಕುಸ್ತಿ ಪಟು ಮಾಡ್ಬೇಕು ಅಂತ ಕುಸ್ತಿ ಅಕಾಡೆಮಿಗೆ ಸೇರಿಸ್ತಾರೆ. ಕುಸ್ತಿ ಅಂದ್ರೆ ಹೆಲ್ತಿ ಫುಡ್ ತಿನ್ನಬೇಕು, ಪ್ರತಿದಿನಾ ಲೀಟರ್ ಗಟ್ಲೆ ಹಾಲು ಕುಡಿಬೇಕು. ಅದಕ್ಕಾಗಿ ತಂದೆ ಮನೆಯಿಂದ್ಲೇ ಹಾಲು ಹಣ್ಣು ತಗೊಂಡು ಹೋಗಿ ಕೊಡ್ತಿದ್ರು. ಇದಕ್ಕಾಗಿ ಪ್ರತಿದಿನ 40 ಕಿಲೋಮೀಟರ್ ಟ್ರಾವೆಲ್ ಮಾಡ್ತಿದ್ರು. ಈಗ ಅದಕ್ಕೆ ಬೆಲೆ ಸಿಕ್ಕಿದ್ದು, ಮೋದಿಯೇ ಹೆಮ್ಮೆ ಪಟ್ಟಿದ್ದಾರೆ. ಮತ್ತೊಂದು ಕಡೆ ಕರೆಂಟ್​ ಇಲ್ಲದ ಹಳ್ಳಿಯ ಬೆಳಕ್ಕಾಗಿದ್ದಾರೆ.

    ಕುಗ್ರಾಮದಲ್ಲಿ ಹುಟ್ಟಿದ ಲವ್ಲೀನಾ ಸಾಧನೆ ಅಮೋಘ!
    ನೋಡಿ ಕೆಲವು ಸಾಧಕರ ಕುಟುಂಬ ಇನ್ನೂ ಎಷ್ಟು ಕಷ್ಟದಲ್ಲಿದೆಯಂತ. ಅದಕ್ಕೆ ಸಾಕ್ಷಿಯೇ ಡಿಸ್ಕಸ್ ಥ್ರೋ ಪ್ಲೇಯರ್ ಕಮಲ್‌ಪ್ರೀತ್ ಕೌರ್. ಈಕೆ ಫೈನಲ್​ನಲ್ಲಿ ಎಡವಿದ್ರು, ಭಾರತೀಯರ ಹೃದಯ ಗೆದ್ದಿದ್ದಾಳೆ. ಈಕೆಯ ತಂದೆಯೂ ಬಡ ರೈತ. ಮಗಳು ಒಲಿಂಪಿಕ್ಸ್ನಲ್ಲಿ ಫೈನಲ್ಗೆ ತಲುಪಿ ತಾಕತ್ತು ಪ್ರದರ್ಶನ ಮಾಡ್ತಿದೆ, ಪಾಪ ಅವರ ಅಪ್ಪ ಹೊಲದಲ್ಲಿ ಕೆಲ್ಸ ಮಾಡ್ತಿದ್ರು. ಯಾಕಂದ್ರೆ ಮನೇಲಿ ಕೂತ್ರೆ ಹೊಟ್ಟೆಗೆ ಕೂಳು ಬೇಕಲ್ವಾ ಅಂತಾರೆ ಅಷ್ಟು ಕಷ್ಟದಲ್ಲಿ ಚಿಗುರಿದ ಸಾಧಕಿ ಈಕೆ. ಇನ್ನು ಬಾಕ್ಸರ್ ಲವ್ಲೀನಾ ಬೋರ್ಗೋಹೇನ್​​​ದ್ದು ಇದೇ ಕಥೆ. ಅಸ್ಸಾಂನ ಹಳ್ಳಿಯೊಂದರಲ್ಲಿ ಜನಿಸಿದ ಕ್ರೀಡಾತಾರೆ. ಬಡತನದಲ್ಲಿಯೇ ಬೆಳೆದ ಕೆಚ್ಚೆದೆಯ ಹುಡುಗಿ ಈಕೆ. 2000 ಜನ್ರು ಇರೋ ಕುಗ್ರಾಮದಲ್ಲಿ ತಂದೆ ಚಿಕ್ಕ ಉದ್ಯಮಿ ಆದ್ರೂ ಪೈಸೆ ಪೈಸೆಗೂ ಪರದಾಟ. 2500 ತಿಂಗಳಿಗೆ ಪಡೆಯುತ್ತಿದ್ದ ಕುಟುಂಬದ ಕುಡಿ ಈಗ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾಳೆ. ಅಲ್ಲಿಗೆ ಸಾಧನೆಗೆ ಯಾವ್ದೂ ಅಡ್ಡಿಯಲ್ಲ ಅನ್ನೋದನ್ನ ಸಾಬೀತು ಮಾಡಿದ್ದಾರೆ ಈ ಸಾಧಕರು.

    ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!

    ಬಿಗ್​ಬಾಸ್​ ವಿನ್ನರ್​ ಲ್ಯಾಗ್​ ಮಂಜುಗಿಂತಲೂ ಅರವಿಂದ್​ಗೆ ಸಿಕ್ಕಿದೆ ಭಾರೀ ಮೊತ್ತದ ಹಣ? ಹೀಗೊಂದು ಲೆಕ್ಕಾಚಾರ..!

    ಅಭಿಮಾನಿಗಳ ಪ್ರಾರ್ಥನೆ ನೆರವೇರಿಲಿಲ್ಲ: ಸ್ಫೂರ್ತಿಯ ಚಿಲುಮೆಯಾಗಿದ್ದ ಯುವ ನಟಿ ಶರಣ್ಯಾ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts