ನಿಪ್ಪಾಣಿಯಲ್ಲಿ ಸರಣಿ ಕಳ್ಳತನ

ಬೋರಗಾಂವ: ಸಮೀಪದ ನಿಪ್ಪಾಣಿ ನಗರದ ಮೇಸ್ತ್ರಿ ಹಾಗೂ ಆಝಾದ್ ಬಡಾವಣೆಯಲ್ಲಿ ಕಳ್ಳತನವಾಗಿರುವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬಡಾವಣೆಯಲ್ಲಿ ಕೀಲಿ ಹಾಕಿದ್ದ ಮನೆಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಆರುವರೆ ಗ್ರಾಂ ಬಂಗಾರ ಹಾಗೂ 25 ಸಾವಿರ ರೂ. ನಗದು ಸೇರಿ 2. 22 ಲಕ್ಷ ಮೌಲ್ಯದ ಕಳ್ಳತನ ಮಾಡಿದ್ದಾರೆ.

ಮೇಸ್ತ್ರಿ ಬಡಾವಣೆಯ ಕೃಷ್ಣಾ ಜಾಧವ ಅವರು ಬೆಳಗಾವಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಅವರ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಆರೂವರೆ ಗ್ರಾಂ ಚಿನ್ನ ಹಾಗೂ 10 ಸಾವಿರ ನಗದು ದೋಚಿದ್ದಾರೆ. ಆಝಾದ್ ಬಡಾವಣೆಯ ಶಬ್ಬೀರ ಗದಗ ಅವರ ಮನೆಗೆ ನುಗ್ಗಿ 15 ಸಾವಿರ ನಗದು ದೋಚಿದ್ದಾರೆ.

ನಿಪ್ಪಾಣಿ ಶಹರ ಪೊಲೀಸ್ ಠಾಣೆ ಉಪನಿರೀಕ್ಷಕ ಎಚ್.ಡಿ.ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ನಾಲ್ಕು-ಐದು ತಿಂಗಳಿಂದ ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇದರಿಂದ ನಾಗರಿಕರಲ್ಲಿ ಆತಂಕ ಮನೆಮಾಡಿದೆ.