ನಾಗನೂರಲ್ಲಿ ಪೌರಸೇವಾ ನೌಕರರ ಪ್ರತಿಭಟನೆ

ನಾಗನೂರು: ವೇತನ ಪಾವತಿಗೆ ಆಗ್ರಹಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಎದುರು ಗುರುವಾರ ಪೌರಸೇವಾ ಮತ್ತು ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ಡಿಎಸ್‌ಎಸ್ ಸಂಚಾಲಕ ಸತ್ತೆಪ್ಪ ಕರವಾಡಿ ಮುಷ್ಕರದಲ್ಲಿ ಪಾಲ್ಗೊಂಡರು. ಪ್ರತಿಭಟನೆಕಾರರು ಪಪಂ ಅಧ್ಯಕ್ಷೆ ಶೋಭಾ ಬಬಲಿ ಅವರಿಗೆ ಮನವಿ ಸಲ್ಲಿಸಿದರು. ಸಿಬ್ಬಂದಿ ಯಶವಂತ ಕರಬನ್ನವರ, ಶಿವಾನಂದ ಗೋರಬಾಳ, ಧರೆಪ್ಪ ಯಡ್ರಾಂವಿ, ಲಕ್ಷ್ಮೀ ಸಾಂಬ್ರೆ, ದುಂಡವ್ವ ಮೈಲನ್ನವರ, ಶಾಂತವ್ವ ಮರೆನ್ನವರ, ಲಕ್ಕಪ್ಪ ಮರೆನ್ನವರ, ರಾಜು ಮರೆನ್ನವರ, ಉದ್ದಪ್ಪ ಮರೆನ್ನವರ, ದುಂಡಪ್ಪ ಮೈಲನ್ನವರ, ಲಲಿತಾ ಗಿರೆನ್ನವರ ಇತರರು ಮುಷ್ಕರದಲ್ಲಿ ಭಾಗವಹಿಸಿದ್ದರು.