ಬೆಳಗಾವಿ: ಮುನವಳ್ಳಿಯಲ್ಲಿ ಮತದಾನ ಜಾಗೃತಿ ಜಾಥಾ


ಮುನವಳ್ಳಿ: ಪಟ್ಟಣದಲ್ಲಿ ಶನಿವಾರ ಪುರಸಭೆ ಹಾಗೂ ಸ್ವೀಪ್ ಸಮಿತಿ ಆಶ್ರಯದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾ ಜರುಗಿತು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ, ಅಂಗವಿಕಲರು ಹಾಗೂ ವೃದ್ಧರಿಗೆ ಮತದಾನ ಮಾಡಲು ವೀಲ್‌ಚೇರ್, ರ‌್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಅವರು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ದೃಷ್ಟಿ ಹೀನರಿಗೆ ಮತಯಂತ್ರದಲ್ಲಿ ಬ್ರೈಲ್‌ಲಿಪಿ ಅಳವಡಿಸಲಾಗಿದೆ. ಅಲ್ಲದೆ ಮಂದ ದೃಷ್ಟಿಯುಳ್ಳವರಿಗೆ ಭೂತಕನ್ನಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಗಮ ಮತದಾನಕ್ಕೆ ವಿಶೇಷ ಸಿಬ್ಬಂದಿ ನೆರವು ನೀಡಲಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಹ.ಬ.ಅಸೂಟಿ ಮಾತನಾಡಿ, ಮತದಾನಕ್ಕಾಗಿ ಸರ್ಕಾರಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ್ದು, ಎಲ್ಲರೂ ಮತದಾನ ಮಾಡಬೇಕು ಎಂದರು. ವಿ.ಎಸ್.ಯಕ್ಕುಂಡಿ, ಶಂಕರ ಶೀಲವಂತ, ಬಿಎಲ್‌ಒ ವೀರಣ್ಣ ಕೊಳಕಿ, ಅನಿಲ ಗಿಡ್ನಂದಿ, ಎಂ.ಎಸ್.ಅಜಮನಿ, ಎಚ್.ಜಿ.ನದಾಫ್, ಯಲ್ಲಪ್ಪ ಭಜಂತ್ರಿ, ಬಾಬಾಜಾನ್ ಅತ್ತಾರ್, ವಿ.ಬಿ.ಹೂಲಿ, ಸುರೇಶ ಮಾನೆ, ಮುತ್ತು ಪಾಗದ ಇತರರು ಇದ್ದರು.

Leave a Reply

Your email address will not be published. Required fields are marked *