ಮುಂಡಗೋಡ: ತಾಲೂಕಿನ ಮಳಗಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಬಿಎಸ್ಎನ್ಎಲ್ ಹಾಗೂ ಜಿಯೋ ನೇಟ್ವರ್ಕ್ ಸಮರ್ಪಕವಾಗಿಲ್ಲದ ಕಾರಣ ಮೊಬೈಲ್ಗಳು ಕಾರ್ಯ ನಿರ್ವಹಿಸದೆ ಸಾರ್ವಜನಿಕರು ಪರದಾಡುವಂತಾಗಿದೆ.
ತಾಲೂಕಿನ ಮಳಗಿ ಗ್ರಾಮದಲ್ಲಿ ಏರ್ಟೆಲ್, ಬಿಎಸ್ಎನ್ಎಲ್, ಜಿಯೋ ಹೀಗೆ ಮೂರು ಕಂಪನಿಗಳ ಮೊಬೈಲ್ ಟವರ್ಗಳನ್ನು ಅಳವಡಿಸಲಾಗಿದೆ. ಬಿಎಸ್ಎನ್ಎಲ್ ಹಾಗೂ ಜಿಯೋ ನೆಟ್ವರ್ಕ್ನ ಟವರ್ಗಳು ಒಂದೇ ಕಡೆ ಇವೆ. ಆದರೆ, ಈ ಎರಡು ಟವರ್ಗಳಿಂದ ಸಮರ್ಪಕವಾಗಿ ನೆಟ್ವರ್ಕ್ ಸಿಗದ ಕಾರಣ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಅರಣ್ಯ ಪ್ರದೇಶವೇ ಹೆಚ್ಚಾಗಿರುವ ಕಾರಣ ಸಾರ್ವಜನಿಕರು ಹಲವಾರು ವರ್ಷಗಳಿಂದ ಬಿಎಸ್ಎನ್ಎಲ್ ಸೀಮ್ಳನ್ನು ಖರೀದಿಸಿಕೊಂಡಿದ್ದಾರೆ. ಆದರೆ ದಿನಗಳು ಉರುಳಿದಂತೆ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಮಳಗಿ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಇದ್ದರೆ ಮಾತ್ರ ಬಿಎಸ್ಎನ್ಎಲ್ ಹಾಗೂ ಜಿಯೋ ನೆಟ್ವರ್ಕ್ ಕಾರ್ಯನಿರ್ವಹಿಸುತ್ತವೆ. ವಿದ್ಯುತ್ ಇಲ್ಲದಿದ್ದರೆ ಎರಡೂ ನೆಟ್ವರ್ಕಗಳ ಸಂಪರ್ಕವೇ ಇಲ್ಲದಂತಾಗುತ್ತದೆ. ನಿರಂತರ ಮಳೆಯಿಂದ ಈ ಭಾಗದಲ್ಲಿ ಕೆಲವು ದಿನಗಳಿಂದ ವಿದ್ಯುತ್ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ನೆಟ್ವರ್ಕ್ ಸಹ ಇಲ್ಲದಂತಾಗುತ್ತದೆ.
ನಮ್ಮ ಗ್ರಾಮದಲ್ಲಿ ವಿದ್ಯುತ್ ಸರಬರಾಜಿದ್ದರೆ ಮಾತ್ರ ಬಿಎಸ್ಎನ್ಎಲ್ ಹಾಗೂ ಜಿಯೋ ನೆಟ್ವರ್ಕ್ ಬರುತ್ತದೆ. ವಿದ್ಯುತ್ ಇಲ್ಲದಿದ್ದರೆ ಎರಡೂ ನೆಟ್ವರ್ಕ್ಗಳು ಬಂದ್ ಆಗುತ್ತವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಇತ್ತ ಗಮನಿಸಿ ವಿದ್ಯುತ್ ಇಲ್ಲದ ಸಮಯದ ಲ್ಲಿಯೂ ನೆಟ್ವರ್ಕ್ ಬರುವಂತೆ ಕ್ರಮವಹಿಸುವುದು ಅವಶ್ಯವಿದೆ. | ವಾಸುದೇವ ನಾಯ್ಕ, ಮಳಗಿ ನಿವಾಸಿ