ಲಾಹೋರ್: ಪಾಕಿಸ್ತಾನದಲ್ಲಿರುವ ನಾಲ್ವರು ಚೀನಾ ಪ್ರಜೆಗಳಿಗೆ ಡೆಡ್ಲಿ ಕೊರೊನ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು ಅವರನ್ನು ಲಾಹೋರ್ ಮತ್ತು ಮುಲ್ತಾನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಾಲ್ವರಲ್ಲೂ ಕೊರೊನ ಸೋಂಕಿನ ಲಕ್ಷಣಗಳು ಕಂಡುಬಂದಿದೆ. ಆದರೆ ಯಾವುದೇ ಪ್ರಕರಣವೂ ದೃಢಪಟ್ಟಿಲ್ಲ ಎಂದು ಪಾಕಿಸ್ತಾನ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಪಾಕ್ನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಮೇಜರ್ ಜನರಲ್ ಆಮರ್ ಇಕ್ರಮ್ ಶನಿವಾರ ಮಾಹಿತಿ ನೀಡಿದ್ದು, ಶಂಕಿತ ರೋಗಿಗಳನ್ನು ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾಲ್ವರ ರಕ್ತದ ಮಾದರಿಗಳನ್ನು ಚೀನಾಕ್ಕೆ ಕಳಿಸಲಾಗಿದೆ. ಅಲ್ಲಿಯೇ ಪರೀಕ್ಷೆ ನಡೆಸಬೇಕು. ಯಾಕೆಂದರೆ ಪಾಕಿಸ್ತಾನದಲ್ಲಿ ಕೊರೊನ ವೈರಸ್ ಪತ್ತೆಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳು ಪಾಕಿಸ್ತಾನದ ಲ್ಯಾಬೋರೇಟರಿಗಳಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಈ ನಾಲ್ವರು ಚೀನಾ ಪ್ರಜೆಗಳಲ್ಲಿ ಓರ್ವ ಚೀನಾದಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಜ.21ರಂದು ಕರಾಚಿಗೆ ತಲುಪಿದ್ದ. ಅಲ್ಲಿಂದ ಮುಲ್ತಾನ್ಗೆ ಫ್ಲೈಟ್ನಲ್ಲಿ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹಾಗೇ ಲಾಹೋರ್ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಚೀನಾದ ವುಹಾನ್ ನಗರದವಾರಗಿದ್ದು ಇತ್ತೀಚೆಗಷ್ಟೇ ಲಾಹೋರ್ಗೆ ಆಗಮಿಸಿದ್ದರು. (ಏಜೆನ್ಸೀಸ್)