Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಶೃಂಗೇರಿ ಸನ್ನಿಧಾನದಲ್ಲಿ ಅಜ್ಜಿ ಇಂದಿರಾ ಕನವರಿಕೆ

Thursday, 22.03.2018, 3:02 AM       No Comments

| ಶ್ರೀಕಾಂತ ಶೇಷಾದ್ರಿ

ಚಿಕ್ಕಮಗಳೂರು: ನಾಲ್ಕು ದಶಕದ ಹಿಂದೆ ಪಕ್ಷಕ್ಕೆ ಮರುಹುಟ್ಟು ಕೊಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ‘ನಂಬಿಕೆ’ ಯಾತ್ರೆ ನಡೆಸಿದರು. ಶೃಂಗೇರಿ ಪೀಠ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗೆಸ್ ನಾಯಕರ ಪಾಲಿಗೆ ಆಪ್ಯಾಯಮಾನ. ಈ ಕಾರಣಕ್ಕೆ ಪಕ್ಷದ ಪಾಲಿಗೆ ಈ ದಿನ ಮಹತ್ವ ಎನಿಸಿತ್ತು.

ಬಯಲು ಸೀಮೆ, ಕರಾವಳಿ ಭಾಗದಲ್ಲಿ ಸಂಚರಿಸಿದ ಜನಾಶೀರ್ವಾದ ಯಾತ್ರೆ ಬುಧವಾರ ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನದ ಗುಡ್ಡಗಾಡು ಭಾಗದ ಏರಿಳಿತದ ರಸ್ತೆಯಲ್ಲಿ ಸಾಗಿಬಂದಿತು. ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಪ್ರಮುಖ ನಾಯಕರು ಇದ್ದರು.

ಬೆಳಗ್ಗೆ ಮಂಗಳೂರಲ್ಲಿ ಪಕ್ಷದ ಮುಖಂಡರ ಜತೆ ಸಭೆ ನಡೆಸಿದ ಬಳಿಕ ಹೆಲಿಕಾಫ್ಟರ್ ಮೂಲಕ ಶೃಂಗೇರಿಗೆ ಆಗಮಿಸಿದರು. ಜಗದ್ಗುರುಗಳ ದರ್ಶನಕ್ಕಾಗಿ ಪಂಚೆ ಉಟ್ಟು, ಶಲ್ಯ ಧರಿಸಿ ಬದಲಾದ ಚಹರೆಯಲ್ಲಿ ರಾಹುಲ್ ಕಾಣಿಸಿಕೊಂಡರಲ್ಲದೇ, ತಮ್ಮೊಂದಿಗಿದ್ದ ಪಕ್ಷದ ನಾಯಕರ ಧಾರ್ವಿುಕ ಸಮವಸ್ತ್ರ ಬದಲಾವಣೆಗೂ ಕಾರಣರಾದರು.

ಬದಲಾವಣೆಯ ನಂಬಿಕೆ: 1978ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರು ಕ್ಷೇತ್ರದಿಂದಲೇ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಸುವ ಮುನ್ನ ಶೃಂಗೇರಿ ಶಾರದಾ ಪೀಠಕ್ಕೆ ತೆರಳಿ ಅಂದಿನ ಪೀಠಾಧಿಪತಿಗಳಿಂದ ಆಶೀರ್ವಾದ ಪಡೆದಿದ್ದರು. ಇಂದಿರಾ ಗಾಂಧಿ ನಿರೀಕ್ಷಿಸಿದಂತೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಲ್ಲದೇ ದೇಶದಲ್ಲೂ ಪಕ್ಷ ಮರುಹುಟ್ಟು ಪಡೆದಿತ್ತು. ಕಾಕತಾಳೀಯವೆಂದರೆ ಇಂದು ರಾಹುಲ್ ಗಾಂಧಿ ಸಹ ಪಕ್ಷದ ಮರುಹುಟ್ಟಿಗೆ ಹೆಣಗುತ್ತಿರುವಾಗಲೇ ಶೃಂಗೇರಿಗೆ ಭೇಟಿ ಕೊಟ್ಟಿದ್ದಾರೆ. ಅಂದು ಇಂದಿರಾ ಜತೆ ದೇವರಾಜ ಅರಸು, ಇಂದು ಸಿದ್ದರಾಮಯ್ಯ ಸಾಥ್ ನೀಡಿದ್ದಾರೆ.

ತೋರಣ ಗಣಪನಿಗೆ 108 ಕಾಯಿ: ನಂಬಿದವರ ಕೈಬಿಡನೆಂಬ ತೋರಣ ಗಣಪನಿಗೆ ರಾಹುಲ್ ಗಾಂಧಿ 108 ಕಾಯಿ ಈಡುಗಾಯಿ ಸೇವೆ ಮಾಡಿ, ಮೋದಕ ಅರ್ಪಿಸಿದರು. ಒಂದು ತೆಂಗಿನ ಕಾಯಿ ಒಡೆದ ರಾಹುಲ್ ಉಳಿದ 107 ಕಾಯಿ ಒಡೆಯುವಂತೆ ದೇವಸ್ಥಾನ ಪುರೋಹಿತರಿಗೆ ತಿಳಿಸಿದರು.

ಉಳುಕಿದ ಸಿಎಂ ಕಾಲು

ಶೃಂಗೇರಿ ಪೀಠಕ್ಕೆ ಪೂಜೆ ಸಲ್ಲಿಸಿದ ನಂತರ ಮಠದ ಗುರುನಿವಾಸಕ್ಕೆ ಶ್ರೀಗಳನ್ನು ಭೇಟಿ ಮಾಡಲು ಪಂಚೆ, ಶಲ್ಯ ಹಾಕಿಕೊಂಡು ನಡೆದುಕೊಂಡು ಹೋಗುವಾಗ ಸಿಎಂ ಸಿದ್ದರಾಮಯ್ಯ ಕಾಲು ಉಳುಕಿತು. ತುಂಗಾ ನದಿ ತೂಗು ಸೇತುವೆ ದಾಟುವ ಮೊದಲು ಕಾಲು ನೋವು ಕಾಣಿಸಿಕೊಂಡಾಗ ರಾಹುಲ್​ರನ್ನು ಕಾಲ್ನಡಿಗೆಯಲ್ಲಿ ಬೀಳ್ಕೊಟ್ಟು ಸಿದ್ದರಾಮಯ್ಯ ವಾಪಸ್ ಬಂದರು. ಬಳಿಕ ಮೆಣಸೆ ಸೇತುವೆ ಮೂಲಕ ಕಾರಿನಲ್ಲಿ ಮಠಕ್ಕೆ ಬಂದರು.

ಟ್ರಿಪಲ್ ಆರ್ ರಾಹುಲ್ ಪದೇಪದೆ ರಾಜ್ಯಕ್ಕೆ ಬರುತ್ತಿದ್ದಾರೆ. ಟ್ರಿಪಲ್ ಆರ್ ಎಂದರೆ ರಾಹುಲ್, ರಿಪಿಟೇಷನ್ (ಪುನರಾವರ್ತನೆ), ರ್ಹೆಟೋರಿಕ್ (ಅನಗತ್ಯ ಮಾತು) ಎಂದು ಹೇಳಬಹುದು. ಇವರು ರಾಜ್ಯಕ್ಕೆ ಬಂದಾಗಲೆಲ್ಲ ಪ್ರಧಾನಿ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆಯೇ ಹೊರತು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ ಆಡಳಿತವನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ.

| ಮುರಳೀಧರ್ ರಾವ್ ರಾಜ್ಯ ಬಿಜೆಪಿ ಉಸ್ತುವಾರಿ

ಪ್ರಧಾನಿ ಮೋದಿಗೆ ತಿಳಿವಳಿಕೆ ಇಲ್ಲ

ಧರ್ಮದ ನಿಜವಾದ ಅರ್ಥ ಸಣ್ಣ ಮಕ್ಕಳಿಗೂ ತಿಳಿದಿದೆ, ಆದರೆ ನಮ್ಮ ಪ್ರಧಾನಿ ಮೋದಿಯವರಿಗೆ ಅರ್ಥವಾಗುತ್ತಿಲ್ಲ ಎಂದು ರಾಹುಲ್ ಹರಿಹಾಯ್ದರು. ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ನಾನು ಶೃಂಗೇರಿ ಮಠದಲ್ಲಿ ಪಾಠಶಾಲೆಯ ಮಕ್ಕಳನ್ನು ಭೇಟಿ ಮಾಡಿ ಸಂವಾದ ನಡೆಸಿದೆ. ಧರ್ಮದ ಬಗ್ಗೆ ಆಧ್ಯಾತ್ಮದ ಬಗ್ಗೆ ನಿಮಗೇನು ಗೊತ್ತು? ಧರ್ಮದ ತಳಪಾಯ ಏನು? ಮತ್ತು ಧರ್ಮದ ಅರ್ಥವೇನೆಂದು ಪ್ರಶ್ನಿಸಿದೆ. ಆ ಸಣ್ಣ ಮಕ್ಕಳು ಧರ್ಮದ ಅರ್ಥ ಸತ್ಯ ಮೇವ ಜಯತೆ’ ಎಂದರು. ಹದಿನೈದು ವರ್ಷದ ಮಕ್ಕಳಿಗೆ ಅರ್ಥವಾಗುವ ಧರ್ಮದ ವಿಚಾರ ನಮ್ಮ ಪ್ರಧಾನಿಗೆ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

ಅಂಗನವಾಡಿಗೆ ದಿಢೀರ್ ಭೇಟಿ

ಮಂಗಳವಾರ ರಾತ್ರಿ ಮಂಗಳೂರಿನಲ್ಲಿ ದೇವಸ್ಥಾನ, ಚರ್ಚ್, ದರ್ಗಾ ಭೇಟಿ ಬಳಿಕ ಮಂಗಳೂರು ನಗರದ ರ್ಸಟ್ ಹೌಸ್​ನಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಬುಧವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡರೊಂದಿಗಿನ ಸಭೆ ಮುಗಿಸಿ ಮಂಗಳೂರಿನಿಂದ ತೆರಳುವ ದಾರಿಯಲ್ಲಿ ಅಂಗನವಾಡಿ ಕೇಂದ್ರವೊಂದಕ್ಕೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ರ್ಸ್ಯಕಿಟ್ ಹೌಸ್​ನಿಂದ ಮೇರಿಹಿಲ್ ಹೆಲಿಪ್ಯಾಡ್​ನತ್ತ ಶೃಂಗೇರಿಗೆ ತೆರಳುತ್ತಿದ್ದಾಗ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಬಳಿಯ ಉದಯನಗರದ ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಆಡುತ್ತಿರುವುದು ರಾಹುಲ್ ಕಣ್ಣಿಗೆ ಬಿತ್ತು. ಥಟ್ಟನೆ ತಮ್ಮೊಂದಿಗಿದ್ದ ನಾಯಕರಲ್ಲಿ ಅಲ್ಲಿಗೆ ಹೋಗುವಂತೆ ರಾಹುಲ್ ಸೂಚಿಸಿದರು. ನೇರವಾಗಿ ಅಂಗನವಾಡಿಗೆ ಹೋದ ರಾಹುಲ್ ಮಕ್ಕಳಲ್ಲಿ ಏನು ಕಲಿಯುತ್ತಿದ್ದೀರಿ? ಊಟ ಮಾಡ್ತೀರಾ ಎಂದೆಲ್ಲ ಪ್ರಶ್ನಿಸಿ ಖುಷಿಪಟ್ಟರು.

ಶ್ರೀಗಳ ಜತೆ ಸಮಾಲೋಚನೆ

ಶ್ರೀಗಳು ವಾಸವಾಗಿರುವ ಗುರುನಿವಾಸದಲ್ಲಿ ಮೊದಲು ರಾಹುಲ್ ಗಾಂಧಿ ಒಬ್ಬರೇ ಸ್ವಾಮೀಜಿ ಜತೆ ಹತ್ತು ನಿಮಿಷ ಸಮಾಲೋಚಿಸಿದರು. ಧರ್ಮ, ಸಂಪ್ರದಾಯ, ಪೀಠದ ಇತಿಹಾಸ, ಗಾಂಧಿ ಕುಟುಂಬದ ನಂಟಿನ ಬಗ್ಗೆ ಶ್ರೀಗಳು ರ್ಚಚಿಸಿದರು. ಶಾಸ್ತ್ರ, ಪುರಾಣ, ಸಂಪ್ರದಾಯಗಳ ರಕ್ಷಣೆಗೂ ಕಾಂಗ್ರೆಸ್ ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ಶ್ರೀಗಳಿಗೆ ತಿಳಿಸಿದರು ಎನ್ನಲಾಗಿದೆ.

ಅಜ್ಜಿ ನೆನಪು, ನಾನು ನಿಮ್ಮವನು

ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಆಗಮಿಸಿದ ರಾಹುಲ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಚಿಕ್ಕಮಗಳೂರಿಗೆ ಬಂದಾಗ ಹಳೇ ನೆನಪಾಗುತ್ತಿದೆ ಎಂದು ಭಾಷಣ ಆರಂಭಿಸಿದ ಅವರು ನಾನು ನಿಮ್ಮ ಋಣ ಮರೆಯುವುದಿಲ್ಲ, ನಾನು ನಿಮ್ಮವನು ಎಂದು ಹೇಳುತ್ತಲೇ ಜನರ ಮನಸ್ಸು ಮುಟ್ಟಲು ಪ್ರಯತ್ನಿಸಿದರು. ನನ್ನ ಅಜ್ಜಿ ಇಂದಿರಾ ಗಾಂಧಿಯವರಿಗೆ ಕ್ಲಿಷ್ಟಕರ ಸಂದರ್ಭದಲ್ಲಿ ನೀವು ಬೆಂಬಲವಾಗಿ ನಿಂತಿದ್ದೀರಿ. ಅಂದು ವಿರೋಧಿಗಳು ರಾಜಕೀಯವಾಗಿ ದಮನ ಮಾಡುತ್ತಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಜನ ಬೆಂಬಲ ಕೊಟ್ಟಿದ್ದಕ್ಕೆ ನಾನು ಆಭಾರಿ ಎಂದಾಗ ಜನ ಹಷೋದ್ಗಾರ ಮಾಡಿದರು.

ಪುತ್ರನನ್ನು ಸಿಎಂ ಮಾಡುವುದಕ್ಕಾಗಿ ದಲಿತರು, ಅಲ್ಪಸಂಖ್ಯಾತರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳá-ತ್ತಿ ರá-ವ ದೇವೇಗೌಡರು, ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಲಿ ನೋಡೋಣ.

| ಸಿದ್ದರಾಮಯ್ಯ ಮುಖ್ಯ ಮಂತ್ರಿ

ಜೆಡಿಎಸ್ ಬಿಜೆಪಿಯ ಬಿ ಟೀಮ್

ಹಾಸನ: ಜನಾಶೀರ್ವಾದ ಯಾತ್ರೆಯ ಎರಡು ಹಂತಗಳಲ್ಲಿ ಜೆಡಿಎಸ್ ವಿರುದ್ಧ ಮಾತನಾಡದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೂರನೇ ಹಂತದ ಯಾತ್ರೆಯ ಕೊನೆಗೆ ದೇವೇಗೌಡರ ತವರಿನಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ. ಬಿಜೆಪಿಯ ಬಿ ಟೀಮ್ ಎಂಬ ಗಂಭೀರ ಆರೋಪ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್​ನವರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜೆಡಿಎಸ್​ನವರು ಪರೋಕ್ಷ ಸಹಾಯ ಮಾಡುತ್ತಿದ್ದಾರೆ. ಹಿಂಬಾಗಿಲ ರಾಜಕೀಯ ಮಾಡಿದರೆ ಜನರಿಗೆ ಗೊತ್ತಾಗಲಾರದು ಅಂತ ಜೆಡಿಎಸ್​ನವರು ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಯಾರು ಏನೇ ಮಾಡಿದರೂ ಗೆಲ್ಲುವುದು ಕಾಂಗ್ರೆಸ್ ಪಕ್ಷವೇ. ಆರ್​ಎಸ್​ಎಸ್​ನ ತಂಡಗಳೇ ಆಗಲಿ, ಯಾರೇ ಬಂದರೂ ನಮ್ಮ ಗೆಲುವು ತಡೆಯಲು ಸಾಧ್ಯವಿಲ್ಲ ಎಂದರು.

Leave a Reply

Your email address will not be published. Required fields are marked *

Back To Top