ಬೆಟ್ಟದಿಂದ ಕೆಳಗೆ ಉರುಳಿದ ಕಾರು, 11 ಜನರ ಸಾವು

ಕುಲ್ಲು(ಹಿಮಾಚಲ ಪ್ರದೇಶ) : ಬೆಟ್ಟದಿಂದ ಕಾರು ಕೆಳಗೆ ಉರುಳಿದ ಪರಿಣಾಮ 11 ಜನರು ಮೃತಪಟ್ಟಿರುವ ಘಟನೆ ರಾಣಿ ನಲ್ಲಾದ ರೋಹ್ಟಂಗ್‌ನಲ್ಲಿ ನಡೆದಿದೆ.

ವಾಹನದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ಇದ್ದರು ಎನ್ನಲಾಗಿದ್ದು, ಐವರು ಮಹಿಳೆಯರು, ಮೂವರು ಮಕ್ಕಳು ಸೇರಿ 11 ಜನ ಮೃತಪಟ್ಟಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಭಾರಿ ಮಳೆಯಿಂದಾಗಿ ಮೋಡ ಕವಿದಿದ್ದರಿಂದಾಗಿ ದಾರಿ ಕಾಣದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಇನ್ನು ಬುಧವಾರ ರಾತ್ರಿ ಘಟನೆ ನಡೆದಿದ್ದರೂ ಗುರುವಾರ ಮುಂಜಾನೆ ಪೊಲೀಸರ ಗಮನಕ್ಕೆ ಬಂದಿದೆ. ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ. (ಏಜೆನ್ಸೀಸ್)